ಬಂಟ್ವಾಳ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು 28ರಂದು ಹಮ್ಮಿಕೊಂಡಿರುವ ಬಂದ್ ಗೆ ಬೆಂಬಲ ಸೂಚಿಸಬಾರದು ಎಂದು ಬಿಜೆಪಿ ಬಂಟ್ವಾಳ ಘಟಕ ಮನವಿ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪು ಹಣ ವಿರುದ್ಧ ಸಮರ ಸಾರಿದ್ದು, 500, 1000 ರೂ ನೋಟು ನಿಷೇಧಿಸಿದ ಕ್ರಮಕ್ಕೆ ದೇಶವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಇದನ್ನು ಸಹಿಸದ ವಿರೋಧ ಪಕ್ಷಗಳು ಕಪ್ಪು ಕುಳಗಳೊಂದಿಗೆ ಸೇರಿಕೊಂಡು ದೇಶದಾದ್ಯಂತ ದೊಂಬಿ ಗಲಭೆ ಎಬ್ಬಿಸಲು ಸಂಚು ರೂಪಿಸಿ ಸೋಮವಾರ ಭಾರತ್ ಬಂದ್ ನಡೆಸಲು ಕರೆ ನೀಡಿವೆ, ಈ ಬಂದ್‌ಗೆ ಯಾವುದೇ ರೀತಿಯಲ್ಲಿ ಬೆಂಬಲ ನೀಡದಂತೆ ನಗರದ ವರ್ತಕರು,ವಾಹನ ಚಾಲಕರು ಮತ್ತು ಮಾಲಕರು ಹಾಗೂ ಸಾರ್ವಜನಿಕರಲ್ಲಿ ಬಂಟ್ವಾಳ ನಗರ ಬಿಜೆಪಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಹಾಗೂ ಪ್ರಧಾನ ಕಾರ್‍ಯದರ್ಶಿಯಾದ ಪ್ರೇಮನಾಥ ಬಂಟ್ವಾಳ ಮನವಿ ಮಾಡಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…