ಪುತ್ತೂರು: ರಾಜಧಾನಿ ಜ್ಯುವೆಲರ್ಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರಮೀಜ್ ರಾಜಾ ಎಂಬಾತ ನ.23ರಂದು ಅಬುದಾಭಿಯಿಂದ ಚೆನ್ನೈ ಮೂಲಕ ಕೇರಳದಲ್ಲಿರುವ ತನ್ನ ಮನೆಗೆ ಬರುವವ ಸಂದರ್ಭ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಆತನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಗರ ಠಾಣಾ ವ್ಯಾಪ್ತಿಯೊಳಗಿರುವ ರಾಜಧಾನಿ ಜ್ಯುವೆಲರ್ಸ್ ಗೆ ಬೈಕಿನಲ್ಲಿ 2015ರ ಅಕ್ಟೋಬರ್ 6ರಂದು ಬಂದು ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ ಪ್ರಕರಣ ಸುದ್ದಿಯಾಗಿತ್ತು.
ಈಗಾಗಲೇ ಕಾಲಿಯಾ ರಫೀಕ್, ಅಬ್ದುಲ್ ಆಸೀರ್, ಮಹಮ್ಮದ್ ಹನೀಫ್, ಮುನ್ನಾ ಮತ್ತು ಅನ್ವರ್ ಸುಂಕದಕಟ್ಟೆ ಅವರನ್ನು ಬಂಧಿಸಲಾಗಿತ್ತು. ಪುತ್ತೂರು ನಗರ ಪೊಲೀಸ್ ಠಾಣಾ ಅಪರಾದ ವಿಭಾಗದ ಪಿ.ಎಸ್.ಐ. ವೆಂಕಟೇಶ್ ಕೆ. ಹಾಗೂ ಸಿಬ್ಬಂದಿಗಳಾದ ಸ್ಕರಿಯ, ಹೆಚ್.ಸಿ. ನಾರಾಯಣ, ಪ್ರಶಾಂತ್ ರೈ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.