ಜಿಲ್ಲಾ ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ

ಚಂದ್ರಶೇಖರ್. ಎಸ್. ಅಂತರ

ಕಾರ್ತಿಕ ಮಾಸ ಎಂದರೆ ಉತ್ಸವಗಳ ಪರ್ವಕಾಲ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 24ರಿಂದ 29ವರೆಗೆ ಲಕ್ಷದೀಪೋತ್ಸವದ ಸಡಗರ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಹಬ್ಬ. ಲಕ್ಷದೀಪೋತ್ಸವ ಕೇವಲ ಜನಜಾತ್ರೆಯಲ್ಲ; ಇದು ಭಕ್ತಿ ಭಾವೈಕ್ಯದ ಸಮ್ಮಿಲನ. ಸಾಂಸ್ಕೃತಿಕ ಉತ್ಸವ ಮಾತ್ರವಲ್ಲದೆ ಸಾಹಿತ್ಯ ಹಾಗೂ ಸರ್ವಧರ್ಮಗಳ ಸಂಗಮ.

ಧರ್ಮಸ್ಥಳ ಸರ್ವಧರ್ಮ ಸಮನ್ವಯಕೇಂದ್ರ ಎಂಬ ಹೆಗ್ಗಳಿಕೆ ಇದೆ. ೮೪ನೇ ವರ್ಷದ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನಗಳು ಜರುಗಲಿವೆ. ಈ ಸರ್ವಧರ್ಮ ಸಮ್ಮೇಳನದಲ್ಲಿ ಜಾತಿ, ಮತ, ಪಂಥದ ಭೇದ ಭಾವಿಸದೆ, ದೇಶದ ಖ್ಯಾತ ಧರ್ಮಗುರುಗಳನ್ನು ಕರೆಸಿ, ಧರ್ಮದ ವಿಚಾರವಾಗಿ ಜನರಿಗೆ ಮಾರ್ಗದರ್ಶನ ನೀಡುವ ವೇದಿಕೆಯಾಗಿದೆ. ಜನರ ಬಾಳಲ್ಲಿ ಶಾಂತಿ, ಸೌಹಾರ್ದ, ನೆಮ್ಮದಿ ಸಹಬಾಳ್ವೆಯ ಮಹತ್ತ್ವವನ್ನು, ಧರ್ಮದ ಸಾರವನ್ನು ಜನಸಾಮಾನ್ಯರಿಗೂ ಮನದಟ್ಟಾಗುವಂತೆ ಬಿಡಿಸಿ, ತಿಳಿ ಹೇಳುವ ಈ ಸರ್ವಧರ್ಮ ಸಮ್ಮೇಳನದ ಉದ್ದೇಶ ಮಹತ್ತರವಾದುದು. ನಾಡಿನ ಖ್ಯಾತ ಸಾಹಿತಿಗಳು ಜ್ಞಾನದ ಬೆಳಕನ್ನು ಪಸರಿಸಲಿದ್ದಾರೆ.

ವರ್ಷಂಪ್ರತಿಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರಗುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಈ ಬಾರಿಯೂ ವಿಜೃಂಭಣೆಯಿಂದ ನಡೆಯಲಿವೆ. ನವೆಂಬರ್ 24ಕ್ಕೆ ಪ್ರಾರಂಭಗೊಳ್ಳುವ ಉತ್ಸವವು ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಯೊಂದಿಗೆ ಮೊದಲ್ಗೊಂಡು 5 ದಿನಗಳಲ್ಲಿ ಹೊಸಕಟ್ಟೆ, ಕೆರೆಕಟ್ಟೆ, ಲಲಿತೋದ್ಯಾನ, ಕಂಚಿಮಾರು ಮತ್ತು ಗೌರಿಮಾರು ಕಟ್ಟೆಗಳಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ನಡೆಯಲಿದೆ.

28ರಂದು ಬೆಳ್ಳಿ ರಥೋತ್ಸವ ನಡೆಯಲಿದೆ. ಲಲಿತಕಲಾಗೋಷ್ಠಿ, ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ ಜೊತೆಗೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯುತ್ತದೆ. ನಾಡಿನ ಖ್ಯಾತ ವಿದ್ವಾಂಸರು, ಸಾಹಿತಿಗಳು, ಕಲಾವಿದರು ಆಗಮಿಸುತ್ತಾರೆ. ಕಲಾಪ್ರೇಮಿಗಳು, ಚಿಂತಕರು ಹಾಗೂ ವಸ್ತುಪ್ರದರ್ಶನದಲ್ಲಿ ರಾಜ್ಯದ ಹಲವೆಡೆಯಿಂದ ಮಳಿಗೆದಾರರು, ನಾಡಿನ ವಿವಿಧೆಡೆಯಿಂದ ಸಹಸ್ರಾರು ಸಂಕ್ಯೆಯಲ್ಲಿ ಜನರು ಭಾಗವಹಿಸುತ್ತಾರೆ.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿಗಳಿಗೆ ರುಡ್‌ಸೆಟ್, ಸ್ತ್ರೀ ಸಬಲೀಕರಣಕ್ಕೆ ಸಿರಿ ಹೀಗೆ ಶ್ರೀ ಕ್ಷೇತ್ರದ ವತಿಯಿಂದ ಸಾಲು ಸಾಲು ಸಮಾಜಮುಖಿ ಯೋಜನೆಗಳು ಲಕ್ಷ ಲಕ್ಷಜನರ ಮನೆ-ಮನದಲ್ಲಿ ಅಭಿವೃದ್ಧಿಯ ಬೆಳಕನ್ನು ಮೂಡಿಸಿವೆ. ಶಿಕ್ಷಣ ಸಂಸ್ಥೆಗಳ ಮೂಲಕ ನಾಡಿನಾದ್ಯಂತ ಜ್ಞಾನದ ಬೆಳಕನ್ನು ಪಸರಿಸುತ್ತಿದೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ ಅನೇಕ ದೇವಾಲಯಗಳು ಮರುಹುಟ್ಟು ಪಡೆದುಕೊಂಡಿವೆ. ಅಖಿಲ ಕರ್ನಾಟಕಜ ಜಾಗೃತಿ ವೇದಿಕೆಯ ಮೂಲಕ ಮದ್ಯಪಾನದದುಶ್ಚಟಕ್ಕೆ ಬಲಿಯಾದ ಸಹಸ್ರಾರು ಜನರನ್ನು ಮದ್ಯವ್ಯಸನ ಮುಕ್ತರನ್ನಾಗಿಸಿ, ಅವರ ಬಾಳು ಬೆಳಗುವ ಕಾರ್ಯವು ನಡೆಯುತ್ತಿದೆ. ಬರ ಪೀಡಿತ ಜಿಲ್ಲೆಗಳಿಗೆ ಜೀವಜಲ ಒದಗಿಸಿ, ಸಹಕಾರವಿತ್ತು, ಕೆರೆಯ ಹೂಳೆತ್ತುವ ಕಾರ್ಯನಿರ್ವಹಿಸಿ, ಕಷ್ಟದಲ್ಲಿದ್ದ ಬಡವರ, ರೈತರ ಬದುಕನ್ನು ಹಸನಾಗಿಸಿದ ಶ್ರೇಯಸ್ಸು ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲಬೇಕು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts

ಬಿ.ಸಿ.ರೋಡ್ ನಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…

8 hours ago