ಬಂಟ್ವಾಳ: ಕಾರಣಿಕ ಕ್ಷೇತ್ರ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ನಡೆಯಲಿದೆ.
ಶುಕ್ರವಾರ 25ರಂದು ರಾತ್ರಿ 1 ಗಂಟೆಗೆ ವರ್ಷಾವಧಿ ಕೋಲ ನಡೆಯಲಿದೆ. ಗುರುವಾರ ಸಂಜೆ 5.59ಕ್ಕೆ ಕೊಪ್ಪರಿಗೆ ಮುಹೂರ್ತ, ಸಂಜೆ 6ರಿಂದ ಕುಣಿಕೆ ಭಜನೆ ಶ್ರೀ ಕೃಷ್ಣ ಭಜನಾ ಮಂದಿರ ಪಣೋಲಿಬೈಲು, ಸಂಜೆ 6.30ರಿಂದ 8.30ವರೆಗೆ ನೃತ್ಯ ಸುಧಾ ಮಂಗಳೂರು, ಸೌಮ್ಯ ಸುಧೀಂದ್ರ ರಾವ್ ಅವರಿಂದ ಭರತನಾಟ್ಯ ಮತ್ತು ನೃತ್ಯವೈಭವ ನಡೆಯಲಿದೆ.
ರಾತ್ರಿ 8.30ರಿಂದ 11.30ವರೆಗೆ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ನಡೆಯಲಿದೆ. ಭಾಗವತರಾಗಿ ಎಂ.ದಿನೇಶ ಅಮ್ಮಣ್ಣಾಯ, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ, ಚಕ್ರತಾಳದಲ್ಲಿ ರಜನೀಶ ಹೊಳ್ಳ, ಪಾತ್ರಧಾರಿಗಳಾಗಿ ಈಶ್ವರ – ಅಶೋಕ ಭಟ್, ಪಾರ್ವತಿ – ಅಂಬಾಪ್ರಸಾದ್ ಪಾತಾಳ, ಭಸ್ಮಾಸುರ – ರಾಧಾಕೃಷ್ಣ ನಾವಡ, ವಿಷ್ಣು – ಡಿ.ಮಾಧವ ಬಂಗೇರ, ಮೋಹಿನಿ- ಅಕ್ಷಯ ಮಾರ್ನಾಡ್.
25ರಂದು ಶುಕ್ರವಾರ ಬೆಳಗ್ಗೆ 9ರಿಂದ ನವಕ, ಕಲಶಪ್ರಧಾನ, 12 ತೆಂಗಿನಕಾಯಿ ಗಣಹೋಮ, ಬೆಳಗ್ಗೆ 11ರಿಂದ ನಾಗತಂಬಿಲ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಭಜನಾ ಮಂಡಳಿಯಿಂದ ಭಜನೆ, ಅಪರಾಹ್ನ 4.30ರಿಂದ ಗೌರಿ ಗಣೇಶ ಭಜನಾ ಮಂಡಳಿ ತೊಕ್ಕೊಟ್ಟಿನಿಂದ ಭಜನಾ ಕಾರ್ಯಕ್ರಮ, ಸಂಜೆ 6ರಿಂದ 7ವರೆಗೆ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಭಜನೆ, ರಾತ್ರಿ 7ಗಂಟೆಗೆ ಶ್ರೀಕೃಷ್ಣ ಭಜನಾ ಮಂದಿರ ಪಣೋಲಿಬೈಲಿನನಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ. ರಾತ್ರಿ 7ರಿಂದ 8.30ವರೆಗೆ ಸಾಧನಾ ಸಂಗೀತ ವಿದ್ಯಾಲಯ ಬಿ.ಸಿ.ರೋಡ್ ವಿದುಷಿ ಸುಚಿತ್ರಾ ಹೊಳ್ಳರ ಶಿಷ್ಯವೃಂದದವರಿಂದ ಸಂಗೀತಾ ಕಾರ್ಯಕ್ರಮ. ರಾತ್ರಿ 8.30ರಿಂದ 10ವರೆಗೆ ಕಲರ್ಸ್ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಪೂರ್ವಿ ಕೆ. ರಾವ್ ಅವರಿಂದ ಡ್ಯಾನ್ಸ್, ರಾತ್ರಿ 10ರಿಂದ 1ವರೆಗೆ ಕಿಶೋರ್ ಡಿ. ಶೆಟ್ಟಿ ನಿರ್ದೇಶನದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದರು ಅಭಿನಯಿಸುವ ತುಳು ಹಾಸ್ಯಮಯ ನಾಟಕ ದುಂಬುಒರಿ ಪಂತೆಗೆ ನಡೆಯುವುದು.