ಬಂಟ್ವಾಳ: ತಾಲೂಕಿನ ಎಲಿಯ ಮಾಗಣೆಗೊಳಪಟ್ಟ ಎಲಿಯನಡುಗೋಡು ಗ್ರಾಮದ ಕಾರಣಿಕ ಕ್ಷೇತ್ರವಾದ ಉಪ್ಪಿರ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಮುಜುಲ್ನಾಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು ನೂತನ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಜರಗಿತು.
ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಆಡಳಿತ ಮೊಕ್ತೇಸರ ಜೀವಂದರ್ ಕುಮಾರ್ ಅವರು ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಧಾರ್ಮಿಕಭೆಯಲ್ಲಿ ಮಾತನಾಡಿ ಶುಭಹಾರೈಸಿದರು.ಶ್ರೀ ಕ್ಷೇತ್ರ ಪೂಂಜದ ಪ್ರ.ಅರ್ಚಕ ಅನಂತ ಆಚಾರ್ಯ ಅವರು ಆಶೀರ್ವಚನ ನೀಡಿದರು
ಕ್ಷೇತ್ರ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಮಾತನಾಡಿ ಪಂಚ ಗ್ರಾಮಗಳ ಮಾಗಣೆಗೊಳಪಟ್ಟ ಈ ಕ್ಷೇತ್ರ 150 ವರ್ಷಗಳ ಹಿಂದೆ ಹಿರಿಯರು ಆರಾಧಿಸಿಕೊಂಡು ಬಂದಿದ್ದು, ಪರ್ವ, ನರ್ತನ ಸೇವೆಗಳಿಂದ ಕಾರಣಿಕ ಕ್ಷೇತ್ರವೆಂದು ಮೆರೆಯುತ್ತಿತ್ತು.ಕಾಲಕ್ರಮೇಣ ನಿಂತು ಹೋಗಿತ್ತು.ಪೂಂಜ ದೇವಸ್ಥಾನದ ಬ್ರಹ್ಮಕಲಶ ಸಂದರ್ಭದಲ್ಲಿ ಸ್ಥಳ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಜೀರ್ಣೋದ್ಧಾರದ ಸಂಕಲ್ಪ ಮಾಡಲಾಗಿದೆ.ಸುಮಾರು ಎಂಬತ್ತು ಲಕ್ಷ ರೂ.ವೆಚ್ಚವಿದೆ.ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕಾಗಿದೆ ಎಂದರು.
ಆಡಳಿತ ಸಮಿತಿ ಅಧ್ಯಕ್ಷ ಮೂಡಬಿದಿರೆ ಚೌಟರ ಅರಮನೆ ಕುಲದೀಪ್ ಚೌಟ,ಗೌರವ ಸಲಹೆಗಾರ ಶ್ರೀನಿವಾಸ ಪೆರಾಡ್ಕರ್,ಟ್ರಸ್ಟ್ ಅಧ್ಯಕ್ಷ ಪ್ರಕಾಶ್‌ಜೈನ್ ಜಂಕಳ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಆಟ್ಲೊಟ್ಟುಗುತ್ತು (ಕೇದಗೆ),ಮಂಗಳೂರು ಉದ್ಯಮಿ ಸುರೇಶ್ ಶೆಟ್ಟಿ,ಜಿ.ಪಂ.ಸದಸ್ಯ ಧರಣೇಂದ್ರ ಕುಮಾರ್,ರಾಯಿ ಕೊಯಿಲ ಹಿಂದೂ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು,ರವೀಂದ್ರ ಅರಮನೆ ಅವರು ಉಪಸ್ಥಿತರಿದ್ದರು.
ಪ್ರಮುಖರಾದ ರತ್ನಕುಮಾರ ಚೌಟ, ಸಂದೇಶ್ ಶೆಟ್ಟಿ ಪೊಡುಂಬ, ಭೋಜ ಶೆಟ್ಟಿ ನವರಂಗ್, ಹರೀಶ್ ಹಿಂಗಾಣಿ, ಜಗತ್ಪಾಲ ಶೆಟ್ಟಿ, ಬೇಬಿ ಶೆಟ್ಟಿ, ರಾಘವೇಂದ್ರ ಭಟ್, ಮಹಾಬಲ ಶೆಟ್ಟಿ,ಮಹಾವೀರ ಜೈನ್, ಕೃಷ್ಣಯ್ಯ ಆಚಾರ್ಯ ಉಮೇಶ್ ಶೆಟ್ಟಿ ಕೊನೆರೊಟ್ಟು, ಹರಿಪ್ರಸಾದ ಶೆಟ್ಟಿ, ಧರ್ನಪ್ಪ ಶೆಟ್ಟಿ, ರವಿ ಮೇಸ್ತ್ರಿ, ಸದಾಶಿವ ಕುಲಾಲ್, ಜನಾರ್ದನ ಬಂಗೇರ, ಸೀತಾರಾಮ ಶೆಟ್ಟಿ, ಗುತ್ತಿನ ಮನೆಯವರು, ವಿವಿಧ ಸಮಿತಿಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಎಲಿಯಮಾಗಣೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾನೂನು ಸಲಹೆಗಾರ,ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಅವರು ಸ್ವಾಗತಿಸಿದರು. ಉಮೇಶ್ ಹಿಂಗಾಣಿ ಕಾರ್ಯಕ್ರಮ ನಿರೂಪಿಸಿದರು.