ಬಂಟ್ವಾಳ: ಸಿದ್ಧಕಟ್ಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ ನಿರಂತರ ಓದುವ ಹವ್ಯಾಸದ ಜೊತೆಗೆ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ದುಡಿದು ಇತರ ಕಲಾವಿದರಿಗೂ ಮಾರ್ಗದರ್ಶನ ನೀಡುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿದ ದಿವಂಗತ ಚೆನ್ನಪ್ಪ ಶೆಟ್ಟಿ ಮತ್ತು ದಿವಂಗತ ವಿಶ್ವನಾಥ ಶೆಟ್ಟಿ ಅವರು ಹುಟ್ಟೂರಿಗೆ ಹೆಮ್ಮೆ ತಂದಿದ್ದಾರೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಹೇಳಿದ್ದಾರೆ.
ತಾಲ್ಲೂಕಿನ ಸಿದ್ಧಕಟ್ಟೆ ಶ್ರೀ ಮಹಿಷಮಧರ್ಿನಿ ಯಕ್ಷಾಂತರಂಗ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ದಿವಂಗತ ಚೆನ್ನಪ್ಪ ಶೆಟ್ಟಿ ಮತ್ತು ದಿವಂಗತ ವಿಶ್ವನಾಥ ಶೆಟ್ಟಿ ಸಂಸ್ಮರಣೆ ಮತ್ತು ಯಕ್ಷಾರ್ಪಣೆ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ರಂಗಕ್ಕೆ ವಿಶೇಷ ಮೆರುಗು ತಂದಿದ್ದ ಸಿದ್ಧಕಟ್ಟೆದ್ವಯರು ಅಲ್ಪಾವಧಿಯಲ್ಲೇ ನಮ್ಮಿಂದ ದೂರವಾಗಿದ್ದಾರೆ ಎಂದರು.
ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದರಾದ ಸಂಗಬೆಟ್ಟು ಪದ್ಮನಾಭ ಶೆಟ್ಟಿಗಾರ್, ಸಿದ್ಧಕಟ್ಟೆ ಸದಾಶಿವ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಮಾಜಿ ಸದಸ್ಯ ಅರ್ಕಕೀತರ್ಿ ಇಂದ್ರ, ಎಪಿಎಂಸಿ ಸದಸ್ಯ ರತ್ನಕುಮಾರ್ ಚೌಟ ಮತ್ತಿತರರು ಶುಭ ಹಾರೈಸಿದರು.
ವಲಯ ಬಂಟರ ಸಂಘದ ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಬಿಲ್ಲವ ಸಂಘದ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ಕುಲಾಲ ಸಂಘದ ಅಧ್ಯಕ್ಷ ಭೋಜ ಮೂಲ್ಯ, ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ಕ್ಷೇತ್ರದ ಗುರಿಕಾರ ಚಂದ್ರಹಾಸ ಶೆಟ್ಟಿಗಾರ್, ವಿಶ್ವಕರ್ಮ ಯುವಕ ಸಂಘದ ಮಾಜಿ ಅಧ್ಯಕ್ಷ ಅಚ್ಚುತ ಆಚಾರ್ಯ, ಕೋಯರ್ಾರು ಶ್ರೀ ದುಗರ್ಾ ಮಹಮ್ಮಾಯಿ ಕ್ಷೇತ್ರದ ಗುರಿಕಾರ ಗೋಪಾಲ ಗೌಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಲೋಕಯ ಗಾಡಿಪಲ್ಕೆ, ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ ಆಚಾರ್ಯ ಎಲ್ಪೇಲು, ವಕೀಲ ಸುರೇಶ ಶೆಟ್ಟಿ, ಹೇಮಲತಾ ಚೆನ್ನಪ್ಪ ಶೆಟ್ಟಿ, ಜಯಂತಿ ವಿಶ್ವನಾಥ ಶೆಟ್ಟಿ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಸ್ವಾಗತಿಸಿ, ವಂದಿಸಿದರು. ಡಾ.ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಯಕ್ಷ ಹಾಸ್ಯ ವೈಭವ ಮತ್ತು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.