ಬಂಟ್ವಾಳ: ಹಳ್ಳಿಯ ಆಟವೆಂದೇ ಖ್ಯಾತಿಯಾದ ಕಬಡ್ಡಿಯು ಇಂದು ವಿಶ್ವ ಮಾನ್ಯತೆಯನ್ನು ಪಡೆದಿರುವುದು ಸಂತಸದಾಯಕವಾಗಿದೆ ಎಂದು ಮುಳಿಹಿತ್ಲು ಸೀತಾರಾಮ್ ಹೇಳಿದರು.
ಸ್ವಸ್ತಿಕ್ ಫ್ರೆಂಡ್ಸ್ ಗಣೇಶ್ ಕೋಡಿ ವೀರಕಂಭ ದಶಮಾನೋತ್ಸವದ ಸವಿನೆನಪಿಗಾಗಿ ಆಯೋಜಿಸಿದ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯರಾದ ಜಿ.ಶ್ಯಾಂಭಟ್ ತೋಟ ವೀರಕಂಭ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಂಬಳ ಮಾಜಿ ತೀರ್ಪುಗಾರ ಬಿ.ಶೀನ ಶೆಟ್ಟಿ ಬರೆ ವೀರಕಂಭ ಕಬಡ್ಡಿ ಶ್ರೇಷ್ಠ ಆಟವಾಗಿದೆ. ಇಂದು ಅದರ ಪ್ರಚಾರದಿಂದ ಮನೆಗಳಲ್ಲಿ ವೀಕ್ಷಿಸುತ್ತಿದ್ದ ಧಾರವಾಹಿಯು ನಿಂತು ಹೋಗುವಷ್ಥು ಬದಲಾವಣೆಯ ಗಾಳಿ ಬೀಸಿದೆ ಎಂದರು.
ಧಾರ್ಮಿಕ ಮತ್ತು ಸಾಮಾಜಿಕ ಪ್ರೋತ್ಸಾಹಕ ಸುಂದರ ಆಳ್ವ ಗೋಳ್ತಮಜಲುಗುತ್ತು, ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾದ ತೀರ್ಪುಗಾರರು ಹಾಗೂ ತರಬೇತು ದಾರರಾದ ಧರ್ಣಪ್ಪ ಕೆ. ಖಂಡಿಗ ಕೇಪು ವಿಟ್ಲ, ಹಿರಿಯ ನಾಗರಿಕರಾದ ಚಂದ್ರಯ್ಯ ಆಚಾರ್ಯ ಗಣೇಶ್ ಕೋಡಿ ವೀರಕಂಭ ಅತಿಥಿಗಳಾಗಿ ಭಾಗವಹಿಸಿದ್ದರು.
ಆನಂದ, ಸುಂದರ ಆಳ್ವ, ಹಾಗೂ ಗಂಗಯ್ಯ ನಾಯ್ಕ್‌ರವರನ್ನು ಸನ್ಮಾನಿಸಾಯಿತು.
ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳ್ಳಿಪ್ಪಾಡಿಗುತ್ತು, ಮಾಧವ ಮಾವೆ, ಮಹಾಬಲ ಆಳ್ವ, ಸ್ಥಳೀಯ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಸಂದೀಪ್ ಗಣೇಶ್ ಕೋಡಿ ಸ್ವಾಗತಿಸಿ, ರವೀಶ್ ಆಚಾರ್ಯ ಧನ್ಯವಾದ ನೀಡಿದರು, ರಾಜೇಶ್ ಕೊಟ್ಟಾರಿ ಕೊಳಕೀರ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪದಲ್ಲಿ .ತಾ.ಪಂ ಸದಸ್ಯರಾದ ಮಹಾಬಲ ಆಳ್ವ ಗೋಳ್ತಮಜಲು ಗುತ್ತು, ವೀರಕಂಭ ಗ್ರಾ.ಪಂ. ಸದಸ್ಯರಾದ ಜಯಂತಿ ಜನಾರ್ಧನ, ಮತ್ತು ರಾಮಚಂದ್ರ ಪ್ರಭು, ಪ್ರೇಮ ಜಯಕರ ಆಚಾರ್ಯ, ಶೀನ ಶೆಟ್ಟಿ ಬರೆ, ಹಾಗೂ ಮಹಾಬಲ ಆಳ್ವ ಭಾಗವಹಿಸಿದ್ದರು.
ವಿಜೇತರಾಗಿ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಪ್ರಥಮ, ಶ್ರೀ ಚಕ್ರ ವಾಮದಪದವು ದ್ವಿತೀಯ, ಅಮ್ಮ ಫ್ರೆಂಡ್ಸ್ ಗೋಳ್ತಮಜಲು ’ಬಿ’ ತಂಡ ತೃತಿಯ ಹಾಗೂ ’ಎ’ ತಂಡ ಚತುರ್ಥ ಬಹುಮಾನವನ್ನು ಪಡೆದುಕೊಂಡರು. ಹಾಗೂ ಶಿಸ್ತಿನ ತಂಡ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಸಾಚಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.ವಿಘ್ನೇಶ್ ಸ್ವಾಗತಿಸಿ, ರವೀಶ್ ವಂದಿಸಿದರು.