ವಿಟ್ಲ: ಜೇಸಿ ವತಿಯಿಂದ ಜೇಸಿ ಇಂಡಿಯಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ವಿಠಲ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ಸಭಾ ಭವನದಲ್ಲಿ ವಿಟ್ಲ ಜೇಸಿಐ ಘಟಕದ ಅಧ್ಯಕ್ಷ ಬಾಬು ಕೆ ವಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್, ಉಪಾಧ್ಯಕ್ಷ ಮಂದಾರ ಕಾಳೆ, ನಿಯೋಜಿತ ಉಪಾಧ್ಯಕ್ಷ ಮೋಹನ್ ಎ, ವಿಠಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಹಾಗೂ ವಿಟ್ಲ ಜೇಸಿಐ ನಿಯೋಜಿತ ಅಧ್ಯಕ್ಷ ರಮೇಶ್ ಬಿ ಕೆ ಭಾಗವಹಿಸಿದ್ದರು.
ವಿಟ್ಲ ಸೈಂಟ್ ರೀಟಾ ಶಾಲೆ ಮತ್ತು ವಿಠಲ ಪ್ರೌಢ ಶಾಲೆಯ ಒಟ್ಟು 11 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಬೊಳಂತಿಮೊಗರು ಶಾಲೆಯ ಶಿಕ್ಷಕ ವಿಠಲ ನಾಯಕ್ ರವರಿಂದ ಗೀತಾ ಸಾಹಿತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೇಸಿಐ ಅಧ್ಯಕ್ಷ ಬಾಬು ಕೆ ವಿ ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ನಿಯೋಜಿತ ಕಾರ್ಯದರ್ಶಿ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಸಂಜೀವ ಎಂ ಸಹಕರಿಸಿದರು. ಶಾಲಾ ಶಿಕ್ಷಕರು, ಮಕ್ಕಳು, ಜೇಸಿ ಸದಸ್ಯರುಗಳಾದ ಸಂತೋಷ್ ಕುಮಾರ್, ಜಯಂತ, ಅಣ್ಣಪ್ಪ ಸಾಸ್ತಾನ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…