ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸಂಘದ ಸದಸ್ಯರಿಗೆ 2 ನೇ ಹಂತದ ಗುರುತು ಚೀಟಿ ವಿತರಿಸುವ ಸಮಾರಂಭವು ವಿಟ್ಲ ಮಾದರಿ ಶಾಲೆಯಲ್ಲಿ ನಡೆಯಿತು.
ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಗುರುತಿನ ಚೀಟಿ ವಿತರಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಅದ್ಯಕ್ಷತೆ ವಹಿಸಿದ್ದರು.
ಕಾರು ಚಾಲಕ- ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ವಿಟ್ಲ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಮಾಣಿಲ, ಸಂಘಟನೆಯ ಕಾರ್ಯಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಸಂಚಾಲಕ ಗೋಪಾಲ್ ನೇರಳಕಟ್ಟೆ, ಕಲಾ ಸಂಘದ ಅಧ್ಯಕ್ಷ ಮೋಹನದಾಸ್ ಯು ವಿಟ್ಲ, ಪುತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಭಕ್ತಕೋಡಿ ಮತ್ತು ಸಾಮಾಜಿಕ ಕಾರ್ಯಕರ್ತ ಚೆನ್ನಪ್ಪ ಇರಾ ವೇದಿಕೆಯಲ್ಲಿದ್ದರು.
ಸುಪ್ರಿತಾ ಪಿಲಿಂಜ ಸ್ವಾಗತಿಸಿದರು. ವಿದ್ಯಾ ಕಲ್ಲಜೇರ ವಂದಿಸಿದರು. ಕಾರ್ಯದರ್ಶಿ ಚಂದ್ರಶೇಖರ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…