ಬಂಟ್ವಾಳ: ವಕೀಲರ ಸಂಘ , ತಾಲೂಕು ಕಾನೂನು ಸೇವೆಗಳ ಸಮಿತಿ, ಒಡ್ಡೂರು ಫಾರ್ಮ್ಸ್ ಆಶ್ರಯದಲ್ಲಿ ಗಂಜಿಮಠದ ಒಡ್ಡೂರು ಫಾರ್ಮ್ಸ್ ಆವರಣದಲ್ಲಿ ಕೃಷಿ ಅಧ್ಯಯನ ಹಾಗೂ ಕೃಷಿ ಸಂಬಂಧಿ ಕಾನೂನು ಕಾರ್ಯಾಗಾರ ನಡೆಯಿತು.
ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಅಭಿವೃದ್ಧಿ ಪಡಿಸಿದ ಬಗ್ಗೆ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಒಡ್ಡೂರು ಫಾರ್ಮ್ಸ್ ಮಾಲೀಕ, ಪ್ರಗತಿಪರ ಕೃಷಿಕರಾದ ರಾಜೇಶ್ ನಾಯ್ಕ್ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ, ಬಿ.ಸಿ.ರೋಡ್ ನ ಹಿರಿಯ ನ್ಯಾಯವಾದಿ ಪುಂಡಿಕಾಯಿ ನಾರಾಯಣ ಭಟ್, ಕೃಷಿ ಸಂಬಂಧಿ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ನವೋದಯ ವಿಕಾಸ ಯೋಜನೆ ವತಿಯಿಂದ ಅನಿಲ ಸಿಲಿಂಡರ್ ಉಪಯೋಗಿಸುವ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಿವಿಲ್ ನ್ಯಾಯಾಲಯದ ಹಿರಿಯ ವಿಭಾಗದ ನ್ಯಾಯಾಧೀಶರಾದ ಚಂದ್ರಶೇಖರ ಯು., ಕಿರಿಯ ವಿಭಾಗದ ನ್ಯಾಯಾಧೀಶರಾದ ಮಹೇಶ್ ಆರ್., ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ನ್ಯಾಯವಾದಿಗಳಾದ ಆಶಾ ಪ್ರಸಾದ್, ಉಮೇಶ್ ಕುಮಾರ್ ವೈ., ಸುರೇಶ್ ಪೂಜಾರಿ, ಶ್ರೀಧರ ಪೈ, ಜನಾರ್ಧನ ಶೆಟ್ಟಿ, ಜಯರಾಮ ರೈ, ಗಣೇಶಾನಂದ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು. ವಕೀಲ ಪ್ರಸಾದ್ ಕುಮಾರ್ ರೈ ಸ್ವಾಗತಿಸಿದರು. ವಕೀಲ ವೀರೇಂದ್ರ ಎಂ. ವಂದಿಸಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.