ಮಂಗಳೂರು: ಹವ್ಯಕ ಸಭಾ, ದ.ಕ ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ ಹಾಗೂ ಶ್ರೀ ಭಾರತೀ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಎರಡನೇ ಸ್ವಚ್ಛ ಮಂಗಳೂರು ಅಭಿಯಾನವನ್ನು ಮಂ.ನ.ಪ. ದ ಕಾರ್ಪೋರೇಟರ್ ರೂಪ ಡಿ. ಬಂಗೇರ ಅವರು ಉದ್ಘಾಟಿಸಿದರು.
ನಂತರ ನಂತೂರಿನ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯ ವೇಳೆ ಹವ್ಯಕ ಮಂಗಳೂರು ಮಂಡಲದ ಉಪಾಧ್ಯಕ್ಷ ಗಣೇಶ ಮೋಹನ್ ಕಾಶೀಮಠ, ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ವೇಣುಗೋಪಾಲ ಭಟ್, ಶ್ರೀ ಭಾರತೀ ಕಾಲೇಜಿನ ಸಮಿತಿಯ ಅಧ್ಯಕ್ಶ ಡಾ, ರಾಜೇಂದ್ರ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಡುವೆ ಶ್ರೀ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಹಾಗೂ ಶಾಸಕ ಗಣೇಶ ಕಾರ್ಣಿಕ್ ಸಂದರ್ಶಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.