ಬಂಟ್ವಾಳ: ಜನಾರೋಗ್ಯವೇ ರಾಷ್ಟ್ರಶಕ್ತಿ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿಯಾನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ಜರಗಿತು.
ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ತಲಪಾಡಿ ಮೊಫತ್ತಿಲಾಲ್ ಲೇಔಟ್‌ವರೆಗೆ ಸಮವಸ್ತ್ರಧಾರಿ ನೂರಾರು ಕಾರ್ಯಕರ್ತರಿಂದ ಆಕರ್ಷಕ ಮ್ಯಾರಾಥಾನ್ ರ್‍ಯಾಲಿ ನಡೆಯಿತು. ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು ರ್‍ಯಾಲಿ ಕಮೋಂಡರ್‌ಗೆ ಸಂಘಟನೆಯ ಧ್ವಜ ನೀಡುವ ಮೂಲಕ ಮ್ಯಾರಾಥಾನ್ ರ್‍ಯಾಲಿಗೆ ಚಾಲನೆ ನೀಡಿದರು.
ಮೊಫತಿಲಾಲ್ ಲೇಔಟ್ ಮೈದಾನದಲ್ಲಿ ಶಹೀದ್ ಮುಸ್ತಫಾ ಕಾವೂರು ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಯೋಗ ಪ್ರಾತ್ಯಕ್ಷಿಕೆ ನೀಡಲಾಯಿತು.
ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು, ಕಾರ್ಯದರ್ಶಿ ಸಲೀಂ ಕುಂಪಣಮಜಲು, ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ, ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ದ.ಕ. ಜಿಲ್ಲಾ ಯೋಗ ಉಸ್ತುವಾರಿ ಶಾಫಿ ಕಲ್ಲಡ್ಕ ಉಪಸ್ಥಿತರಿದ್ದು ಜನಾರೋಗ್ಯದ ಬಗ್ಗೆ ಸಂದೇಶ ನೀಡಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…