ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಥಮ ಸೇವೆ ಆಟಗಳ ಬಳಿಕ ತಿರುಗಾಟದ ಮೊದಲ ಪ್ರದರ್ಶನ ಬಿ.ಸಿ.ರೋಡಿನ ರಂಗೋಲಿಯಲ್ಲಿ ನಡೆಯಿತು.
ಮೇಳದ ಕಾಲಮಿತಿ ತಿರುಗಾಟ ಕಳೆದ ವರ್ಷ ಯಶಸ್ವಿಯಾಗಿತ್ತು. ಈ ಬಾರಿ ಲಕ್ಷ್ಮೀ ಸ್ವಯಂವರ – ಶ್ರೀನಿವಾಸ ಕಲ್ಯಾಣ ಪ್ರಸಂಗ ವೀಕ್ಷಣೆಗೆ ಅಪಾರ ಜನಸಂದಣಿ ಇತ್ತು. ಸಚಿವ ಬಿ.ರಮಾನಾಥ ರೈ ಅವರೂ ಆಗಮಿಸಿ ಯಕ್ಷಗಾನ ವೀಕ್ಷಿಸಿದರು.