ತುಳು ನಾಟಕ ಪ್ರಿಯರಿಗೆ ಸಂತಸದ ಸುದ್ದಿ.
ಇದು ತುಳು ರಂಗಭೂಮಿಯಲ್ಲೂ ಸಂಚಲನ ಮೂಡಿಸಿರುವ ವಿಚಾರ. ಪ್ರತಿಭಾವಂತ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ದೇವದಾಸ ಕಾಪಿಕಾಡ್ ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.
ಇವರಿಗೆ ವೇದಿಕೆ ಒದಗಿಸಿದ್ದು, ಕೆ.ಕೆ.ಫ್ರೆಂಡ್ಸ್ ಮಂಗಳೂರು.
ಮಂಗಳೂರು ಪುರಭವನ ಹಿಂದೊಮ್ಮೆ ತುಳು ನಾಟಕ ಪ್ರದರ್ಶನಕ್ಕೆ ಸಂಬಂಧಿಸಿ ಹೌಸ್ ಫುಲ್ ಆಗುತ್ತಿತ್ತು. ಮತ್ತೆ ಅದೇ ವೈಭವಕ್ಕೆ ಮರಳಲಿದೆಯಾ? ಕಾಪಿಕಾಡ್, ಕೊಡಿಯಾಲ್ ಬೈಲ್ ಅಭಿಮಾನಿಗಳಿಗೆ ಬಿಟ್ಟ ವಿಚಾರವಿದು. ಆದರೆ ನವೆಂಬರ್ 26ರಂದು ಮಂಗಳೂರು ಪುರಭವನದಲ್ಲಿ ರಾತ್ರಿ 10.30ಕ್ಕೆ ಚಾ ಪರ್ಕ ಕಲಾವಿದರ ಅಭಿನಯದ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್ ರಚನೆ ನಿರ್ದೇಶನದಲ್ಲಿ ಕೊಡೆ ಬುಡ್ಪಾಲೆ ಎಂಬ ನಾಟಕ ಭೋಜರಾಜ ವಾಮಂಜೂರು ಸಮರ್ಥ ಅಭಿನಯದಲ್ಲಿ ಇಡೀ ಚಾಪರ್ಕ ತಂಡದಿಂದ ಮೂಡಿಬರಲಿದೆ. ಅದರೊಟ್ಟಿಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆ-ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರು ಅಭಿನಯಿಸುವ ತುಳುನಾಡ ರತ್ನ ದಿನೇಶ್ ಅತ್ತಾವರ ಸಹಿತ ಪ್ರಮುಖ ಕಲಾವಿದರ ಸಂಗಮದಲ್ಲಿ ತುಳು ವಿಭಿನ್ನ ಶೈಲಿಯ ಹಾಸ್ಯದ ಜೊತೆಗೆ ಸಂದೇಶಭರಿತ ನಾಟಕ ಕಡಲಮಗೆ ಪ್ರದರ್ಶನ.
ಇವೆಲ್ಲದರ ಜೊತೆಗೆ ಉಮೇಶ್ ಮಿಜಾರ್ ತಂಡದ ತೆಲಿಕೆದ ಗೊಂಚಲು, ನಿಶಾನ್ ರೈ ಅವರಿಂದ ಹಾಡುಗಾರಿಕೆ ಮನರಂಜಿಸಲಿದೆ.