ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ಆತಿಥ್ಯದಲ್ಲಿ ನ. 19ಮತ್ತು 20ರಂದು ಬಂಟವಾಳದ ಬಂಟರ ಭವನದಲ್ಲಿ ರೋಟರಿ ಜಿಲ್ಲೆ 3181ರ 2016-17 ಸಾಲಿನ ರೋಟರಿ ಫೌಂಡೇಷನ್ ಸೆಮಿನಾರ್ ‘ಶತ್ಸಸಂಭ್ರಮ’ ನಡೆಯಲಿದೆ ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ ತಿಳಿಸಿದ್ದಾರೆ.
ರೋಟರಿ ಫೌಂಡೇಷನ್ ನೂರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಶತಮಾನೋತ್ಸವ ಅಂಗವಾಗಿ ಶತ್ಸಸಂಭ್ರಮ ಮಹತ್ವ ಪಡೆದಿದೆ.
ನ. 19ರಂದು ಸಂಜೆ 6ಗಂಟೆಗೆ ಮಾಜಿ ಗವರ್ನರ್ ಜಿ. ಕೆ. ಬಾಲಕೃಷ್ಣನ್ ಸಂಭ್ರಮದ ಅಂಗವಾದ ಸೆಮಿನಾರ್ ಉದ್ಘಾಟಿಸುವರು. ಜಿಲ್ಲಾ ಗವರ್ನರ್ ನಾಗರ್ಜುನ ಸಭಾಧ್ಯಕ್ಷತೆ ವಹಿಸುವರು. ರೋಟರಿ ಜಿಲ್ಲೆ 3131ರ ಮಾಜಿ ಗವರ್ನರ್ ಮಹೇಶ್ ಕೊಟ್‌ಬಾಗಿ ಮುಖ್ಯ ಅತಿಥಿ ಹಾಗೂ ಮುಖ್ಯ ಭಾಷಣಕಾರರಾಗಿರುವರು. ಸಹಾಯಕ ಗವರ್ನರ್ ಸಂತೋಷ್ ಕುಮಾರ್ ಶೆಟ್ಟಿ ಪಾಲ್ಗೊಳ್ಳುವರು. ಜಿಲ್ಲಾ ರೋಟರಿ ಫೌಂಡೇಷನ್ ಸಂಚಾಲಕ ಕೃಷ್ಣ ಶೆಟ್ಟಿ ಮುಂದಾಳತ್ವದಲ್ಲಿ ಸಮಾವೇಶ ನಡೆಯುವುದು.
ಮಾಜಿ ಗವರ್ನರ್ ಕೆ.ಪಿ. ನಾಗೇಶ್, ನಿಯೋಜಿತ ಗವರ್ನರ್ ಸುರೇಶ್ ಚೆಂಗಪ್ಪ, 2017-18 ಸಾಲಿನ ನಿಯೋಜಿತ ಗವರ್ನರ್ ರೋಹಿನಾಥ್ ಪಿ. ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ನ.20ರಂದು ಬೆಳಿಗ್ಗೆ 9.30ಕ್ಕೆ ಮಾಜಿ ಗವರ್ನರ್ ರವಿ ವಡ್ಲಮನಿ ಮುಖ್ಯ ಭಾಷಣ ಮಾಡುವರು. ಮಾಜಿ ಗವರ್ನರ್‌ಗಳಾದ ಅವಿನಾಶ್ ಪೊದ್ದಾರ್ ಮತ್ತು ಆರ್. ಗುರು ಮುಖ್ಯ ಅತಿಥಿಗಳಾಗಿರುವರು.
ಸಮಾವೇಶದಲ್ಲಿ ರೋಟರಿ ಪೌಂಡೇಷನ್ ವಿವಿಧ ಸಾಧನೆ, ಜಾಗತಿಕ ವಿಚಾರ ವಿವಿಧ ವಸ್ತುನಿಷ್ಠ ವಿಚಾರ ಕುರಿತು ಮುಖ್ಯ ಭಾಷಣಕಾರರು ವಿಷಯ ಮಂಡನೆ ಮಾಡುವರು. ದೇಣಿಗೆ ನೀಡಿದ ವಿವಿಧ ಕ್ಲಬ್‌ಗಳ ರೋಟರಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ರೋಟರಿ ಜಿಲ್ಲೆಯ 64 ಕ್ಲಬ್‌ಗಳ 600ಕ್ಕೂ ಅಧಿಕ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಶತ್ಸಸಂಭ್ರಮ ಸಮಾವೇಶ ಸಮಿತಿ ಸಂಚಾಲಕ ಡಾ| ರಮೇಶಾನಂದ ಸೋಮಯಾಜಿ ಪ್ರಕಟಿಸಿದ್ದಾರೆ.