ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ ನವೆಂಬರ್ 18 ಕ್ಕೆ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.
ತಾಲೂಕಿನ ಪ್ರಥಮ ಸಿನಿ ಬ್ಯಾನರ್ ಎಂಬ ಹೆಮ್ಮೆಯ ಈ ಪ್ರಥಮ ಚಿತ್ರ ಶ್ರೀ ಕ್ಷೇತ್ರ ಕಾರಿಂಜದ ಶಿವಪಾರ್ವತಿ ಸನ್ನಿಧಿಯಲ್ಲಿ ಚಾಲನೆಗೊಂಡು ಮುತ್ತಪ್ಪ ರೈ ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್‌ನಲ್ಲಿ ಮತ್ತು ಬಂಟ್ವಾಳ, ಬಿ.ಸಿ.ರೋಡ್ ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಚಿತ್ರದಲ್ಲಿ ಒಂದು ಐಟಂ ಸಾಂಗ್ ಸಹಿತ 4 ಹಾಡುಗಳಿದ್ದು ಎಚ್ಕೆ ನಯನಾಡು, ಮಧು ಸುರತ್ಕಲ್ ಅವರ ಸಾಹಿತ್ಯವಿದೆ.ಕಡಲಮಗೆ ಖ್ಯಾತಿಯ ಚಂದ್ರಕಾಂತ ಶೆಟ್ಟಿ ಅವರು ಸೊಗಸಾಗಿ ಸಂಗೀತ ನಿರ್ದೇಶನ ನೀಡಿದ್ದಾರೆ. ಕುಶಾಲ ಖುಶಿ, ಮಧು ಬಾಲಕೃಷ್ಣ, ಶಶಾಂಕ್, ರಾಜೇಶ್ ಕೃಷ್ಣನ್,ಅನುರಾಧ ಭಟ್ ಹಾಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ 2 ಹೊಡೆದಾಟದ ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದಿದೆ.
ಹೆಸರಾಂತ ಕ್ಯಾಮರಾಮೆನ್ ಸಂತೋಷ್ ರೈ ಪಾತಾಜೆ ಅವರು ಪ್ರಥಮ ಬಾರಿಗೆ ತುಳುಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದು ಅತ್ಯುತ್ತಮ ರೆಡ್‌ಡ್ರ್ಯಾಗನ್ ಅಲೂರಾ ಝೂಮ್ ಕ್ಯಾಮರಾ ಜೊತೆಗೆ 3 ಕ್ಯಾಮರಾ ಬಳಸಿ ಚಿತ್ರೀಕರಣ ನಡೆಸಿದ್ದಾರೆ. ಇದುವರೆಗೆ ಎಲ್ಲೂ ಬಳಕೆಯಾಗದ ಅತ್ಯುತ್ತಮ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ.
ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾಹಂದರವಿರುವ ಚಿತ್ರದಲ್ಲಿ ಉತ್ತಮ ಹಾಸ್ಯವಿದೆ. ಊರಿನ ಸಮಸ್ಯೆಗಳನ್ನು ಬಗೆಹರಿಸುವ ನಾಯಕನ ಸುತ್ತ ಕಥೆಯಿದ್ದು ಸೆಂಟಿಮೆಂಟ್ಸ್ ಜೊತೆ ನವಿರಾದ ಹಾಸ್ಯವಿದೆ. ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರವಾಗಿದೆ.ಶಿವಧ್ವಜ್ ನಾಯಕ ಪಾತ್ರದಲ್ಲಿದ್ದು, ಶಕುಂತಳಾ ನಾಯಕಿ ಯಾಗಿ ನಟಿಸಿದ್ದಾರೆ