ವಿಟ್ಲ: ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ತಿಂಡಿ ತಿನಿಸುಗಳ ಘಮಘಮ. ಯಾರಿಗೆ ಯಾವ ತಿಂಡಿ ಬೇಕು ಎಂಬ ಅನೌನ್ಸ್ ಮೆಂಟ್ ಕೂಡ ಕೇಳಿಬಂತು.
ಇದು ಶುದ್ಧ ತಿಂಡಿ ತಿನಿಸುಗಳ ಕ್ರಯ ವಿಕ್ರಮ ಮೇಳದ ನೋಟ.
ಜೇಸಿಸ್ ಮಾಮ್ಸ್ ರೆಸಿಪಿ 2016 ಶುದ್ಧ ತಿಂಡಿ ತಿನಿಸುಗಳ ಕ್ರಯ ವಿಕ್ರಯ ಮೇಳ ಗುರುವಾರ ಶಾಲೆಯಲ್ಲಿ ನಡೆಯಿತು. ಉದ್ಘಾಟಿಸಿದ ಕಮಲಾ ಕೆ. ಭಟ್ ಕುಡೂರು, ವಿದ್ಯಾರ್ಥಿಗಳಿಗೆ ವಿನೂತನತೆಯನ್ನು ಪರಿಚಯಿಸುವವುದರಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ವಲಯ ಸಂಪನ್ಮೂಲ ವ್ಯಕ್ತಿ ಶಿವರಾಮ ಭಟ್ ಮಾತನಾಡಿ ವ್ಯವಹಾರ ಜ್ಞಾನ ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎಲ್. ಎನ್. ಕೂಡೂರು ಮಾತನಾಡಿ ಕಾರ್ಯಕ್ರಮವನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಕಾಸರಗೋಡು ಕಾಸರಗೋಡು ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ ಪುಷ್ಪರಾಜ್, ವಿಟ್ಲ ಜೇಸೀಐ ಅಧ್ಯಕ್ಷ ಬಾಬು ಕೊಪ್ಪಳ, ವಿಠಲ ಜೇಸೀಸ್ ಶಾಲೆಯ ಕಾರ್ಯದರ್ಶಿ ಶ್ರೀಧರ್ ಕೊಡಕ್ಕಲ್ಲು, ಕೋಶಾಧಿಕಾರಿ ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ ಡಿ, ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಆಡಳಿತಾಧಿಕಾರಿ ಮೋನಪ್ಪ ಶೆಟ್ಟಿ ದೇವಸ್ಯ, ನಿರ್ದೇಶಕರಾದ ಹಸನ್ ವಿಟ್ಲ, ಗೋಕುಲ್ ಶೇಟ್, ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಜೇಸೀಸ್ ಶಾಲೆಯ ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಶಾಲಿನಿ ನೋಂಡಾ ವಂದಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.