ಫರಂಗಿಪೇಟೆ: ಬಾಡಿಗೆಗೆ ಎಂದು ಕರೆದು ಆಟೋ ರಿಕ್ಷಾ ಚಾಲಕನೋರ್ವನಿಗೆ ಹಲ್ಲೆ ನಡೆಸಿರುವ ಘಟನೆ ಪುದು ಗ್ರಾಮದ ಕುಂಪಣಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಪಣಮಜಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಸಿರಾಜ್ ಹಲ್ಲೆಗೊಳಗಾದ ಆಟೋ ರಿಕ್ಷಾ ಚಾಲಕ. ಇಲ್ಲಿನ ನಿವಾಸಿ ಇರ್ಫಾನ್ ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಇಂದು ಬೆಳಗ್ಗೆ 11 ಗಂಟೆಯ ವೇಳೆಗೆ ಫರಂಗಿಪೇಟೆ ಆಟೋ ನಿಲ್ದಾಣದಲ್ಲಿದ್ದ ಸಿರಾಜ್ ನನ್ನು ಬಾಡಿಗೆಗೆಂದು ಕುಂಪಣಮಜಲಿಗೆ ಕರೆದ ಆರೋಪಿ ಇರ್ಫಾನ್ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…