ವಿಟ್ಲ: ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸುಮಾರು 4 ಲಕ್ಷ ವೆಚ್ಚದಲ್ಲಿ ವಿಟ್ಲ ಪೊಲೀಸ್ ಠಾಣೆ ಕಟ್ಟಡದ ಮೇಲ್ಬಾಗದಲ್ಲಿ ಛಾವಣಿ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರರಿಗೆ ನಗದು ಹಸ್ತಾಂತರ ಕಾರ್ಯ ಮಂಗಳವಾರ ನಡೆಯಿತು.
ಗುತ್ತಿಗೆದಾರ ಆರ್ ಎಸ್ ಲಕ್ಷ್ಮಣ ಅವರಿಗೆ ನ.30ರೊಳಗೆ ಕಾಮಗಾರಿ ಮುಗಿಸಿಕೊಂಡುವಂತೆ ವಿನಂತಿಸಿಕೊಂಡು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಚ್ ಜಗನ್ನಾಥ ಸಾಲ್ಯಾನ್ ನಗದು ಹಸ್ತಾಂತರಿಸಿದರು.
ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ವಿ ರಾಮದಾಸ ಶೆಣೈ, ಉಪಾಧ್ಯಕ್ಷರಾದ ವಿ ಎಸ್ ಇಬ್ರಾಹಿಂ, ಎಂ ರಾಧಾಕೃಷ್ಣ ನಾಯಕ್, ಲಿಯೋ ಲಸ್ರಾದೊ, ವಿ ಶೀನ ಕಾಶಿಮಠ, ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ಜತೆ ಕಾರ್ಯದರ್ಶಿ ಬಾಬುಕೊಪ್ಪಳ, ಕೋಶಾಧಿಕಾರಿ ಅನಂತಪ್ರಸಾದ, ಉದ್ಯಮಿ ಹಮೀದ್ ಪರ್ತಿಪ್ಪಾಡಿ, ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಹಾಯಕ ಉಪನಿರೀಕ್ಷಕ ರುಕ್ಮಯ ಮೂಲ್ಯ ಜಿ., ಸಿಬ್ಬಂದಿಗಳಾದ ಜಯಕುಮಾರ್, ಶ್ರೀಧರ, ಪ್ರವೀಣ್ ಕುಮಾರ್, ರಮೇಶ್, ರಾಮಚಂದ್ರ, ರಕ್ಷಿತ್ ರೈ, ಪ್ರವೀಣ್ ರೈ, ಭವಿತ್ ರೈ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…