ವಿಟ್ಲ: ಜಾನುವಾರು ಅಕ್ರಮ ಸಾಗಾಟದ ವಾಹನವೊಂದನ್ನು ವಿಟ್ಲ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಂಟೈನರ್ ಮೂಲಕ ಹಿಂಸಾತ್ಮಕವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುವ ಖಚಿತ ಮಾಹಿತಿ ಆಧಾರದಲ್ಲಿಸಾಲೆತ್ತೂರನಲ್ಲಿ ದಾಳಿ ನಡೆಸಿದ ವಿಟ್ಲ ಪೊಲೀಸರ ತಂಡ ಕಂಟೈನರ್ ಲಾರಿ ಸಹಿತ 9 ಎಮ್ಮೆ ಹಾಗೂ 7 ಎತ್ತುವನ್ನು ವಶಕ್ಕೆ ಪಡೆಯಿತು.
ಚಾಲಕ ನಂಜನಗೂಡು ಕಾವುಲೆಂದ ನಿವಾಸಿ ಫತಿಬ್ (28), ಬೇಲೂರು ಕೆಚ್ಚಬ್ಬಳ್ಳಿ ಹೆಸೂರು ನಿವಾಸಿ ರಹಿಮಾನ್ (38), ಕೊಪ್ಪಲು ಕಲ್ಲಾರೆ ಕಟಾಯ ನಿವಾಸಿ ಗೋಪಾಲ ಗೌಡ (53) ಬಂಧಿತರಾಗಿದ್ದಾರೆ. ಹಾಸನದ ರೈತರಿಂದ ಖರೀದಿಸಿದ ಜಾನುವಾರುಗಳನ್ನು ಕಾಸರಗೋಡಿನ ಕಸಾಯಿಖಾನೆಗೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು.
ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಸಹಾಯಕ ಉಪನಿರೀಕ್ಷಕ ರುಕ್ಮಯ ಮೂಲ್ಯ, ಪೊಲೀಸ್ ಸಿಬ್ಬಂದಿಗಳಾದ ಸೋಮಶೇಖರ್, ರಾಮಚಂದ್ರ, ಜಯಕುಮಾರ್, ಸಂಜೀವ, ಶ್ರೀಧರ್, ಲೋಕೇಶ್, ಪ್ರವೀಣ್ ಕುಮಾರ್, ಉಮೇಶ್, ಗೃಹರಕ್ಷಕದಳದ ಸಂಜೀವ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…