ವಿಟ್ಲ: ವಿಟ್ಲ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಕೃಷ್ಣ ಮೃಗದ ಚರ್ಮ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಕೊಪ್ಪಳ ಎಲಬುರ್ಗಾ ಹಿರೆವೆಂಕಲಕುಂಟೆ ನಿವಾಸಿ ಶರಣಪ್ಪ ಬಜಂತ್ರಿ(34) ಬಂಧಿತ ಆರೋಪಿಯಾಗಿದ್ದಾರೆ. ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮಾಹಿತಿ ಆಧಾರದಲ್ಲಿ ದಾಳಿ ನಡೆದು ಚರ್ಮ ಸಹಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಬಾಬು ಗೌಡ ಡಿ, ಸಿಬ್ಬಂದಿಗಳಾದ ಕುಶಾಲಪ್ಪ ಗೌಡ, ಕರುಣಾಕರ ಬಿ.ಎನ್, ರಮೀಂದ್ರ ಹೆಚ್. ಆರ್, ಸುಂದರ ಶೆಟ್ಟಿ, ರಾಧಾಕೃಷ್ಣ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…