ವಿಟ್ಲ: ಕನ್ಯಾನದ ಶಿರಂಕಲ್ಲಿನಲ್ಲಿ ಹಲ್ಲೆ ನಡೆಸಿದ ಘಟನೆಯ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರ ತಂಡ ಕರ್ನಾಟಕ ಕೇರಳ ಗಡಿ ಭಾಗದ ಆನೆಕಲ್ಲುವಿನಲ್ಲಿ ಬಂಧಿಸಿದ್ದಾರೆ.
ಕನ್ಯಾನ ನಿವಾಸಿಗಳಾದ ಚಂದ್ರಹಾಸ (21), ದಿನೇಶ್ (21) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಭಾನುವಾರ ಅಬೂಬಕ್ಕರ್ ಅವರ ಅಂಗಡಿಗೆ ಬಕಿನಲ್ಲಿ ಆಗಮಿಸಿ ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಮಾತನಾಡಿಸಿ ಹಲ್ಲೆ ನಡೆಸಿದ್ದಾರೆಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಖಚಿತ ಮಾಹಿತಿ ಆದಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪ್ರವೀಣ್ ರೈ, ರಮೇಶ್, ರಕ್ಷಿತ್ ರೈ, ಭವಿತ್ ರೈ ಭಾಗವಹಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)