ಬಿ.ಸಿ.ರೋಡ್: ಬಿ.ಸಿ.ರೋಡ್ ಪರಿಸರದಲ್ಲಿ ಸಂಜೆ 4.30ರ ಸುಮಾರಿಗೆ ಗುಡುಗು, ಮಿಂಚಿನ ಸಹಿತ ಗಾಳಿ ಮಳೆ ಸುರಿಯಿತು. ಕಚೇರಿ ಕೆಲಸಕ್ಕೆಂದು ಬಂದವರು ಪರದಾಡಬೇಕಾಯಿತು. ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದ ಜನರು ತೊಂದರೆಗೊಳಗಾದರು. ಶಾಲೆ, ಕಾಲೇಜುಗಳಿಂದ ಮನೆಗೆ ತೆರಳುವವರು ಸಂಕಷ್ಟಕೀಡಾಗಬೇಕಾಯಿತು.
ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತವರು ಮಳೆಯಿಂದ ಚೆಲ್ಲಾಪಿಲ್ಲಿಯಾಗಿ ಅಂಗಡಿ, ಮುಂಗಟ್ಟುಗಳನ್ನು ಆಶ್ರಯಿಸಿದರು. ಕೆಲವೆಡೆ ಮರದ ಕೊಂಬೆಗಳು ಉರುಳಿದವು.
ಸೋಮವಾರವೂ ಸಂಜೆಯ ವೇಳೆ ಬಿ.ಸಿ.ರೋಡಿನಲ್ಲಿ ಮಳೆ ಸುರಿದಿತ್ತು. ಸತತ ಎರಡನೇ ದಿನ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದ ಗಲಿಬಿಲಿಪಡುವಂತಾಗಿದೆ.
ಮಳೆಯಿಂದಾಗಿ ಕೈಕಂಬ ತಿರುವಿನ ಮಿತ್ತಬೈಲು ಎಂಬಲ್ಲಿ ಪೂಂಜಾ ಮೈದಾನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…