ಬಂಟ್ವಾಳ: ದೇಶದ ಮಣ್ಣನ್ನು ತಾಯಿ ಎಂದು ಗೌರವಿಸುವ ಸಂಸ್ಕೃತಿ ಕಬಡ್ಡಿಯಲ್ಲಿದ್ದು ದೇಶಪ್ರೇಮಕ್ಕೆ ಪೂರಕವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 33ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಿದ ಪ್ರೊ ಕಬಡ್ಡಿ ಮಾದರಿಯ 60 ಕೆ.ಜಿ. ವಿಭಾಗದ ಕೋಟಿ-ಚೆನ್ನಯ ಕಬಡ್ಡಿ ಪಂದ್ಯಾಟದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇದೇ ವೇಳೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ ಮತ್ತು ಸಂಸ್ಕಾರಭಾರತಿ ಲೋಕ ಕಲಾ ವಿಭಾಗ ಸಂಚಾಲಕ ದಯಾನಂದ ಜಿ. ಕತ್ತಲ್‌ಸಾರ್ ಅವರು ಸಾಧಕರಾದ ಜಗದೀಶ್ ಕುಂಬ್ಳೆ ,ಪ್ರಶಾಂತ ರೈ,ರಕ್ಷಿತ್ ಪೂಜಾರಿ, ಚೇತನ್ ಸುವರ್ಣ, ತೌಶೀರ್ ಅವರಿಗೆ ಕೋಟಿ-ಚೆನ್ನಯ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ನಿಕ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಪ್ರಮುಖರಾದ ದೇವದಾಸ ಶೆಟ್ಟಿ, ಸೂರಜ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಸಂಪತ್ ಬಿ.ಸುವರ್ಣ, ಪುರುಷೋತ್ತಮ ಪೂಜಾರಿ, ಲಕ್ಷಿ ನಾರಾಯಣ ಉಡುಪ, ರಮೇಶ್ ಶೆಟ್ಟಿ ಮಜಲೋಡಿ, ಉದಯ ಕುಮಾರ್ ಕಟ್ಟೆಮನೆ, ಪುರುಷೋತ್ತಮ ಶೆಟ್ಟಿ ವಾಮದಪದವು, ಕೆ.ಹರೀಶ್ಚಂದ್ರ ಪೂಜಾರಿ, ಬಿ.ರಾಜಶೇಖರ ಶೆಟ್ಟಿ, ಓಂಪ್ರಕಾಶ್ ಬಿ.ಸಿ.ರೋಡ್, ಮೋಹನ್ ಸಾಲ್ಯಾನ್, ಭಾಸ್ಕರ ಎಕ್ಕಾರು, ರತನ್ ಕುಮಾರ್, ರಮೇಶ್ ಕುಡ್ಮೇರು, ಸತೀಶ್ ಬಿ.ಸಿ.ರೋಡ್, ಶೇಖರ ಕುಕ್ಕೇಡಿ, ಕೇಶವ ಪೂಜಾರಿ, ಡಾ.ವರದರಾಜ್ ಪೈ, ಚಂದ್ರಶೇಖರ ಶೆಟ್ಟಿ ಕುಮಂಗಿಲ, ಶಂಕರ ಶೆಟ್ಟಿ ಬೆದ್ರಮಾರು, ವಸಂತ ಹೆಗ್ಡೆ, ಚಂದ್ರಶೇಖರ ಕರ್ಣ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಬಡ್ಡಿ ಪಂದ್ಯಾಟದ ಪೋಷಕ ಮುಂಬ ಉದ್ಯಮಿ ಸುಂದರರಾಜ್ ಹೆಗ್ಡೆ ಪದಾಧಿಕಾರಿಗಳಾದ ರಾಜೇಶ್ ಪಿ.,ಜಯರಾಜ ಅತ್ತಾಜೆ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಪ್ರಭಾಕರ್ ಪಿ.ಎಂ.ಅವರು ಸ್ವಾಗತಿಸಿದರು. ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ. ಕಾರ್ಯಕ್ರಮ ನಿರೂಪಿಸಿದರು.