ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಸರಕಾರಿ ಜಮೀನಿನ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ನಡೆಯಿತು.
ಗ್ರಾಮದ ಸರಕಾರಿ ಜಮೀನೊಂದನ್ನು ಗುರುತಿಸಲು ಮೋಜಣಿ ಶಾಖೆಗೆ ಸೂಚಿಸಲಾಗಿತ್ತು. ಮೋಜಣಿದಾರರು ಈ ಜಮೀನು ಸರಕಾರಿ ಜಮೀನು ಆಗಿದ್ದು, ನೀರಿನ ಟ್ಯಾಂಕಿಯನ್ನು ಇಟ್ಟು ಸ್ಥಳವನ್ನು ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನಪಡಿಸಿರುವುದಾಗಿ ವರದಿ ನೀಡಿರುವುದರಿಂದ ಅತಿಕ್ರಮಣ ತೆರವುಗೊಳಿಸಲು ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕರು ಆದೇಶಿಸಲಾಗಿತ್ತು.
ಅದರಂತೆ ಪಾಣೆಮಂಗಳೂರು ಕಂದಾಯ ನಿರೀಕ್ಷಕ, ಮೋಜಣಿದಾರರು ಮತ್ತು ಪೊಲೀಸರ ಸಹಕರದಿಂದ ನೀರಿನ ಟ್ಯಾಂಕಿಯನ್ನು ತೆರವುಗೊಳಿಸಿ, 0.31 ಎಕ್ರೆ ವಿಸ್ತೀರ್ಣದ ಸರಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸ್ಥಳದ ಸುತ್ತಲೂ ತಂತಿ ಬೇಲಿ ಹಾಕಿ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.