ವಿಟ್ಲ: ಗಡಿ ಪ್ರದೇಶದ ಕನ್ಯಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಭಾನುವಾರ ರಾತ್ರಿ ಉದ್ವಿಗ್ನತೆಯಾದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿ ಮತ್ತೆ ಶಾಂತಿ ನೆಲೆಸುವಂತಾಗಿದೆ.
ಭಾನುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆದ ಬಳಿಕ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿ, ಕಲ್ಲು ತೂರಾಟ ಹಾಗೂ ಲಘು ಲಾಠೀ ಪ್ರಹಾರ ನಡೆದ ಕನ್ಯಾನ ಪ್ರದೇಶ ಸಹಜ ಸ್ಥಿತಿಯತ್ತ ಮರಳಿದೆ. ಘಟನೆಯ ಬಗ್ಗೆ ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ರವೀಶ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಕನ್ಯಾನ ಪೇಟೆಯಲ್ಲಿ ಒಂದು ಡಿಆರ್ ನಿಯೋಜಿಸಲಾಗಿದೆ. ಹಲ್ಲೆ ನಡೆಸಿದ ಹಾಗೂ ಬಸ್ಸಿಗೆ ಕಲ್ಲು ಎಸೆದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.