ಸಿದ್ದಕಟ್ಟೆ: ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಬೋಂದೆಲ್, ಮಂಗಳೂರು ಇವರು ಶ್ರೀ.ಭಗವತಿ ಚಾರಿಟೇಬಲ್ ಟ್ರಸ್ಟ್(ರಿ) ಸಿದ್ದಕಟ್ಟೆ ಮತ್ತು ಗ್ರಾಮ ಪಂಚಾಯತ್ ಸಂಗಬೆಟ್ಟು ಇವರ ಸಹಯೋಗದಲ್ಲಿ ಸಂಗಬೆಟ್ಟು ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವ ಕಾರ್ಯಕ್ರಮ ಶ್ಲಾಘನೀಯ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದರು. ಅವರು ತರಬೇತಿ ಸಮಾರೋಪದಲ್ಲಿ ಮಾತನಾಡಿದರು.
ಸಿದ್ದಕಟ್ಟೆ ಪ್ರಶಸ್ತಿ ಕಾಂಪ್ಲೆಕ್ಸ್‌ನ ಮಾಲಕ ನಿತ್ಯಾನಂದ ಪೂಜಾರಿ ಮಾತನಾಡಿ ಪ್ಯಾಶನ್ ಟೆಕ್ನಾಲಜಿ ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿಯೇ ಹೆಸರು ವಾಸಿಯಾಗಿದ್ದು ಮಹಿಳೆಯರು ಇದರ ಸದುಪಯೋಗ ಪಡೆಯಬೇಕೆಂದರು.
ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಇಂಟರ್‌ನಲ್ ಪ್ರೋಗ್ರಾಂ ಕೋ-ಆರ್ಡಿನೇಟರ್ ಶಿವಪ್ರಸಾದ್ ರೈ ಅಧ್ಯಕ್ಷತೆ ವಹಿಸಿ 40 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಅನುಷಾ, ಜಯಶ್ರೀ, ಭಾರತಿ ಅನಿಸಿಕೆ ವ್ಯಕ್ತಪಡಿಸಿದರು.
ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಉಪನ್ಯಾಸಕ ರಾಕೇಶ್ ಶೆಟ್ಟಿ, ಶ್ರೀ ಭಗವತಿ ಚಾರಿಟೇಬಲ್ ಟ್ರಸ್ಟ್(ರಿ) ಅಧ್ಯಕ್ಷ ಪ್ರಶಾಂತ್ ಹೆಣ್ಣೂರುಪದವು, ತರಬೇತಿ ಶಿಕ್ಷಕಿ ಪ್ರೇಮಾ ಎಸ್.ಹೆಣ್ಣೂರುಪದವು ಉಪಸ್ಥಿತರಿದ್ದರು. ಸಂಗೀತ ಸ್ವಾಗತಿಸಿ ಜಯಶ್ರೀ ಧನ್ಯವಾದವಿತ್ತರು. ಭಾರತಿ ಕಾರ್‍ಯಕ್ರಮ ನಿರೂಪಿಸಿದರು.