ಬಂಟ್ವಾಳ: ಜಾತಿ, ಧರ್ಮ, ಪಂಥಗಳ ಭೇದ ಮರೆತು ಮನುಷ್ಯರು ಮನುಷ್ಯರನ್ನು ಪರಸ್ಪರ ಪ್ರೀತಿಸುವ ಸಂಘಟನೆಯಿದ್ದರೆ ಅದು ಯುವ ಕಾಂಗ್ರೆಸ್ ಮಾತ್ರ ಎಂದು ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ರಿಜ್ವಾನ್ ಹರ್ಷದ್ ಅಭಿಪ್ರಾಯಪಟ್ಟಿದ್ದಾರೆ.
ಯು.ಟಿ. ಫೌಂಡೇಶನ್ ಮಂಗಳೂರು, ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿ ಸಜೀಪನಡು ಇದರ ಆಶ್ರಯದಲ್ಲಿ ಕಣಚೂರು ಆಸ್ಪತ್ರೆ ದೇರಳಕಟ್ಟೆ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಸಜೀಪನಡು ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಹಿಜಾಮ ಚಿಕಿತ್ಸೆ, ರಕ್ತವರ್ಗಿಕರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಸ್ವಾರ್ಥ ಸಾಧನೆಗಾಗಿ ವಿನಾಃ ಕಾರಣ ಮನುಷ್ಯರನ್ನು ಕೊಲ್ಲುವ ಕೆಲವು ಸಂಘಟನೆಗಳಿವೆ. ಅಂತಹ ಸಿದ್ದಾಂತಗಳನ್ನು ಖಂಡಿಸಬೇಕಾಗಿದೆ. ಪ್ರಾಣವನ್ನು ಪಡೆಯುವ ಅಧಿಕಾರ ದೇವರಿಗೆ ಮಾತ್ರ ಇದೆ. ಆದರೆ ಈ ನಿರ್ಧಾರವನ್ನು ತನ್ನ ಕೈಗೆ ತೆಗೆದುಕೊಳ್ಳುವವನು ಮನುಷ್ಯನೇ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು. ಜನ ಸೇವೆ ಯುವಕಾಂಗ್ರೆಸ್‌ನ ಕರ್ತವ್ಯವಾಗಿದ್ದು ಶಿಬಿರದ ಮೂಲಕ ಜನ ಸೇವೆ ಮಾಡುವ ಇಲ್ಲಿನ ಯುವಕಾಂಗ್ರೆಸ್‌ನ ಕಾರ್ಯ ಶ್ಲಾಘನೀಯ ಎಂದರು.
ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ ರಕ್ತದಾನ, ರಕ್ತವರ್ಗೀಕರಣ ಶಿಬರಗಳಿಂದ ತುರ್ತು ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಿದೆ. ಅಲ್ಲದೆ ಕೋಮುಸೂಕ್ಷ ವೆಂದು ಗುರಿತಿಸಿರುವ ನಮ್ಮ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡಲು ಇಂತಹ ಶಿಬರಗಳಿಂದ ಸಾಧ್ಯವಿದೆ ಎಂದರು.
ಖಾದಿ ಬೋರ್ಡ್ ನಿರ್ದೇಶಕ ಎಸ್.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜೀವಗಾಂಧಿ ವಿವಿ ಸೆನೆಟ್ ಸದಸ್ಯ ಡಾ. ಇಪ್ತಿಕಾರ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಜೀಜ್ ಹೆಜಮಾಡಿ, ಜಿಲ್ಲಾ ಯೂತ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್, ಜಿಲ್ಲಾ ಕಾಂಗ್ರೆಸ್‌ನ ಎಸ್‌ಟಿ ಎಸ್ಸಿ ವಿಭಾಗದ ಅಧ್ಯಕ್ಷ ಪದ್ಮನಾಭ ನರಿಂಗಾಣ, ಕಣಚೂರು ಆಸ್ಪತ್ರೆಯ ಅಬ್ದುಲ್ ರಹಿಮಾನ್ ಎಂ.ಬಿ., ಕೊಣಾಜೆ ಗ್ರಾ.ಪಂ.ಸದಸ್ಯ ಶೌಕತ್ ಅಲಿ, ಮನಪ ಸದಸ್ಯ ಪ್ರವೀಣ್ ಆಳ್ವ, ವಲಯ ಕಾಂಗ್ರೆಸ್ ಮಾಜಿ ಅರ್ದಯಕ್ಷ ರಶೀದ್ ಮತ್ತಿತರರು ಭಾಗವಹಿಸಿದ್ದರು.
ಜಿಲ್ಲಾ ವಕ್ಫ್ ಬೋರ್ಡ್‌ನ ಉಪಾದ್ಯಕ್ಷ ಎಸ್. ಅಬೂಬಕ್ಕರ್ ಸ್ವಾಗತಿಸಿದರು. ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಪಟೋರಿ ವಂದಿಸಿದರು. ಜಸೀಂ ಕಾರ್ಯಕ್ರಮ ನಿರೂಪಿಸಿದರು.