ಚಿತ್ರಕೃಪೆ : ಅಂತರ್ಜಾಲ
ವಿಟ್ಲ: ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಬಾಲಕರ ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಬಾಲಕಿಯರ ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು.
ಚಿತ್ರಕೃಪೆ : ಅಂತರ್ಜಾಲ
ಬಾಲಕರ ವಿಭಾಗದಲ್ಲಿ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿ ದ್ವಿತೀಯ ಸ್ಥಾನ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ರಾಜೇಶ್ ವೈಯಕ್ತಿಕ ಚಾಂಪಿಯನ್ ಪಡೆದರು.
ಬಾಲಕಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿ ದ್ವಿತೀಯ ಸ್ಥಾನ, ಅಡ್ಯನಡ್ಕ ಜನತಾ ಪಿಯು ಕಾಲೇಜು ಯಶಸ್ವಿನಿ, ಬಂಟ್ವಾಳ ಎಸ್.ವಿ.ಎಸ್. ಪಿಯು ಕಾಲೇಜು ಜಾಸ್ಪಿನ್ ಎಸ್.ಎಂ., ವೈಯಕ್ತಿಕ ಚಾಂಪಿಯನ್ ಗಳಿಸಿದರು.
ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ ಬಿ. ಬಾಗೇವಾಡಿ ಬಹುಮಾನವನ್ನು ವಿತರಿಸಿದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್., ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಘು ಟಿವೈ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಈಶ್ವರ ನಾಯ್ಕ್, ಪೂವಪ್ಪ ಶೆಟ್ಟಿ, ಅಳಿಕೆ ಉಪಸ್ಥಿತರಿದ್ದರು.
ಅಶೋಕ ಭಟ್ ಸ್ವಾಗತಿಸಿದರು. ರಾಜೇಂದ್ರ ರೈ ವಂದಿಸಿದರು. ಆನಂದ ನಾಯ್ಕ ಧ್ವಜಾ ಅವರೋಹಣ ಮಾಡಿ, ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…