ಬಂಟ್ವಾಳ: ಬಾಳ್ತಿಲ ಗ್ರಾಮ, ನೀರಪಾದೆಯ ಹಮೀದ್ ಈಗ ಬಂಟ್ವಾಳದಾದ್ಯಂತ ಸುದ್ದಿಯಾಗಿದ್ದಾರೆ.
ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ. ನವೆಂಬರ್ 13ರಂದು ಬೆಳಗ್ಗೆ ಹಮೀದ್ ನಡೆದುಕೊಂಡು ಹೋಗುತ್ತಿದ್ದಾಗ, ಪ್ಲಾಸ್ಟಿಕ್ ಪೇಪರ್ ನಲ್ಲಿ ಸುತ್ತಿದ ವಸ್ತುವೊಂದು ದೊರಕಿತು. ಅದನ್ನು ಬಿಡಿಸಿ ನೋಡಿದಾಗ, 380 ಗ್ರಾಂ ತೂಕದ ಆಭರಣಗಳು ಇದ್ದವು. ಕೂಡಲೇ ಅದನ್ನು ಗ್ರಾಪಂ ಸದಸ್ಯ ಶಿವಕುಮಾರ್ ಅವರಿಗೆ ತೋರಿಸಿದರು.
ಅದರಂತೆ ಶಿವಕುಮಾರ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಅದನ್ನು ಒಪ್ಪಿಸಿದರು.
ಇದೇ ಸಂದರ್ಭ ನ.14ರಂದು ಪಾಣಮಂಗಳೂರಿನ ನರಸಿಂಹ ಪ್ರಭು ತಮ್ಮ ಚಿನ್ನಾಭರಣ ಕಳೆದುಕೊಂಡ ಬಗ್ಗೆ ಗ್ರಾಮಾಂತರ ಪೊಲೀಸರಿಗೆ ತಿಳಿಸಿ, ಆಭರಣದ ಮಾದರಿ ತಿಳಿಸಿದರು. ಹಮೀದ್, ಶಿವಕುಮಾರ್ ಅವರನ್ನು ಪೊಲೀಸರು ಕರೆಸಿ, ಅವರ ಡಿವೈಎಸ್ಪಿ ರವೀಶ್ ಸಮಕ್ಷಮ, ಇತರ ಅಧಿಕಾರಿಗಳ ಮೂಲಕ ಆಭರಣ ನೀಡಲಾಯಿತು.