ಬಿ ಸಿ ರೋಡು : ಬಿ ಸಿ ರೋಡಿನಲ್ಲಿ ವಾಹನ ದಟ್ಟಣೆಯನ್ನು ಸರಿಪಡಿಸಲು ಮತ್ತು ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೈಕುಂಜೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಚಿಂತನೆ ನಡೆಸಿದ್ದು ಜಿಲ್ಲಾಧಿಕಾರಿಯವರು ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್ , ಬಂಟ್ಟಾಳ ತಹಶೀಲ್ದಾರ್ ಪುರಂದರ ಹೆಗ್ಡೆ . ಮುಖ್ಯಧಿಕಾರಿ ಸುಧಾಕರ್ , ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಆಧಿಕಾರಿ ಸಿಪ್ರಿಯಾನ್ ಮಿರಾಂದ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್, ಕಂದಾಯ ಇಲಾಖೆಯ ಅಧಿಕಾರಿಗಳು ಸಮಾಲೋಚನೆ ನಡೆಸಿದನ್ವಯ ಸೋಮವಾರ ಕಂದಾಯ ಇಲಾಖಾಧಿಕಾರಿಗಳು, ಪುರಸಭಾಧಿಕಾರಿಗಳು ರಸ್ತೆ ಅಗಲಗೊಳಿಸುವ ಅಳತೆ ಕಾರ್ಯ ಕೈಗೊಂಡರು.
ಪುರಸಭೆ ಆರ್. ಒ ಶಿವ ನಾಯ್ಕ್, ಬಿ.ಮೂಡ ಗ್ರಾಮ ಕರಣಿಕರಾದ ಯೋಗಾನಂದ, ಸರ್ವೇಯರ್ ರಾಘವೇಂದ್ರ, ಸುರೇಶ್ ಪಿ, ಲೋಹಿತ್, ಯಶವಂತ, ಸಿಬ್ಬಂದಿ ರವೀಂದ್ರ, ಕಂದಾಯ ಇಲಾಖೆಯ ಸದಾಶಿವ ಕೈಕಂಬ, ಪುರಸಭೆ ಸಿಬ್ಬಂದಿ ರಾಘವೇಂದ್ರ, ನಾಗೇಶ್ ಅಳತೆ ಕಾರ್ಯದಲ್ಲಿ ಪಾಲ್ಗೊಂಡರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…