ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12ಸ್ಥಾನಗಳಿಗೆ 29 ನಾಮಪತ್ರ ಸಲ್ಲಿಕೆಯಾಗಿದೆ. ಸೋಮವಾರ ನಾಮತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು.
ಮಾಣಿ ಕ್ಷೇತ್ರಕ್ಕೆ 4 ನಾಮಪತ್ರ ಸಲ್ಲಿಕೆಯಾಗಿದ್ದರೆ, ಪಾಣೆಮಂಗಳೂರು, ತುಂಬೆ, ಚನ್ನ್ಯೆತ್ತೋಡಿ ಕ್ಷೇತ್ರಕ್ಕೆ ತಲಾ 3 ರಂತೆ ನಾಮಪತ್ರ ಸಲ್ಲಿಕೆಯಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳಿಗೂ ತಲಾ 2ರಂತೆ ನಾಮಪತ್ರ ಸಲ್ಲಿಕೆಯಾಗಿದೆ. ನಿರೀಕ್ಷೆಯಂತೆ ಇಲ್ಲಿ ಬಿಜೆಪಿ,ಕಾಂಗ್ರಸ್ ಬೆಂಬಲಿತ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.
15ರಂದು ಪರಿಶೀಲನೆ. 18ರಂದು ವಾಪಸ್ ಪಡೆಯಲು ಕೊನೇ ದಿನ. ಡಿ.4ರಂದು ಬೆಳಗ್ಗೆ 8ರಿಂದ 4ವರೆಗೆ ಮತದಾನ. ಡಿ.6ರಂದು ಮತ ಎಣಿಕೆ.
ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು.
ಈ ಚುನಾವಣೆ ಗ್ರಾ.ಪಂ.ಚುನಾವಣೆ ಮಾದರಿಯಲ್ಲಿ ಪಕ್ಷದ ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ವಿವಿಧ ಪಕ್ಷದ ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಹಿಡಿದು ಪ್ರಚಾರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ನೋಂದಾಯಿತ ಕೃಷಿಕರು, ವರ್ತಕರು ಮತದಾರರು.
ಕ್ಷೇತ್ರಗಳು ಹೀಗಿವೆ.
ಒಟ್ಟು 46001 ಮಂದಿ ತಮ್ಮಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿಯೂ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೂಳ್ಳುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನಾಗಿಸಿದೆ.
ಬಿಜೆಪಿ ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ. ವಿವರ ಹೀಗಿದೆ.
ಸಂಗಬೆಟ್ಟು (ಸಾಮಾನ್ಯ) ವಸಂತ ಅಣ್ಣಳಿಕೆ
ಚೆನ್ನೈತೋಡಿ (ಮಹಿಳೆ) ಮಲ್ಲಿಕಾ ಶೆಟ್ಟಿ
ಅಮ್ಟಾಡಿ (ಹಿಂ.ವ.ಎ.) ರಮೇಶ್ ಪೂಜಾರಿ ಬಟ್ಟಾಜೆ
ಕಾವಳಮೂಡೂರು (ಸಾಮಾನ್ಯ) ಕೆ.ಹರಿಶ್ಚಂದ್ರ ಪೂಜಾರಿ
ಕೊಳ್ನಾಡು (ಹಿಂ.ವ.ಬಿ) ಯೋಗೀಶ್ ಆಳ್ವ
ಅಳಿಕೆ (ಮಹಿಳೆ) ಗೀತಾ .ಟಿ.ಶೆಟ್ಟಿ
ಕೆದಿಲ (ಅನುಸೂಚಿತ ಪಂಗಡ) ಜಗದೀಶ್
ಮಾಣಿ (ಸಾಮಾನ್ಯ) ನೇಮಿರಾಜ್ ರೈ
ಕಡೇಶ್ವಾಲ್ಯ (ಸಾಮಾನ್ಯ) ಆರ್.ಚೆನ್ನಪ್ಪ ಕೋಟ್ಯಾನ್
ಪಾಣೆಮಂಗಳೂರು (ಸಾಮಾನ್ಯ) ಅರವಿಂದ ಭಟ್
ತುಂಬೆ (ಅನುಸೂಚಿತ ಜಾತಿ) ವಿಟ್ಠಲ ಸಾಲಿಯಾನ್
ವರ್ತಕರ ಕ್ಷೇತ್ರ : ಬಾಲಕೃಷ್ಣ ಆಳ್ವ