ವಿಟ್ಲ: ಛಿದ್ರವಾದ ದೇಶ ಮುಂದೊಂದು ದಿನ ಅಖಂಡ ಭಾರತವಾಗುವ ಮೂಲಕ ಜಗತ್ತಿನಲ್ಲಿ ಸೂಪರ್ ಪವರ್ ಆಗಿ ಹೊಮ್ಮಲಿದೆ. ನಮ್ಮ ಶ್ರದ್ಧಾ ಕೇಂದ್ರಗಳ ಹಾಗೂ ನಮ್ಮ ಆಸ್ತಿಯ ಹಕ್ಕುಗಳಿಗೆ ನಾವು ಹೋರಾಟ ನಡೆಸಬೇಕಾಗಿದೆ. ನೆರೆಯ ದೇಶಗಳ ಹೊಂಚಿಗೆ ದಿಟ್ಟ ಉತ್ತರ ನೀಡುವ ಕಾರ್ಯವಾಗಬೇಕು ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದರು.
ಭಾನುವಾರ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ ಶ್ರೀ ದೇವಿ ಭವನದಲ್ಲಿ ಸೋಮಪ್ಪ ಪೂಜಾರಿ ಸ್ಮರಣಾರ್ಥ ವೇದಿಕೆಯಲ್ಲಿ ಪುಣಚ ಭಾರತ ಮಾತಾ ಪೂಜನ ಸಮಿತಿ ವತಿಯಿಂದ ಭಾರತ ಮಾತಾ ಪೂಜನ ಮತ್ತು ಪುಣಚ ಗ್ರಾಮದ ಯೋಧರಿಗೆ ಗೌರವಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ ಹಳಿತಪ್ಪಿದ ಸೈನ್ಯವನ್ನು ಮೋದಿಯವರು ಮತ್ತೆ ಹಳಿಗೆ ತರುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ದೇಶಕ್ಕಾಗಿ ಸೈನಿಕರು ಪಡುವ ಕಷ್ಟದ ಮುಂದೆ ನೋಟಿನ ಸಮಸ್ಯೆ ದೊಡ್ಡದಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣಚ ಮಹಿಷಮರ್ಧಿನಿ ದೇವಸ್ಥಾನದ ಅಧ್ಯಕ್ಷ ಎಸ್ ಆರ್ ರಂಗಮೂರ್ತಿ ವಹಿಸಿದರು. ಪುಣಚ ಭಾರತ ಮಾತಾ ಪೂಜನ ಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್ ಮಲ್ಯ ಉಪಸ್ಥಿತರಿದ್ದರು.
ಕಿರಣ್ ಕುಮಾರ್ ಕಲ್ಕಜೆ ಪ್ರಾರ್ಥಿಸಿದರು. ರಾಮಕೃಷ್ಣ ಮೂಡಂಬೈಲು ಸ್ವಾಗತಿಸಿ, ಪ್ರಸ್ತಾವನೆಗೈದರು. ಅಜೇಯ ಶಾಸ್ತ್ರಿ ಸನ್ಮಾನಿತರ ಪರಿಚಯ ಮಾಡಿದರು. ಶಿವಪ್ರಸಾದ್ ವೈಯಕ್ತಿಯ ಗೀತೆ ಹಾಡಿದರು. ಸಮಿತಿ ಕಾರ್ಯದರ್ಶಿ ರವಿ ಬಿ. ಕೆ. ವಂದಿಸಿದರು. ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.
ಸೈನಿಕರಿಗೆ ಸನ್ಮಾನ ಗೌರವಾರ್ಪಣೆ:
ಪುಣಚ ಗ್ರಾಮದ ಯೋಧರಾದ ಬಾಲಕೃಷ್ಣ, ಹರೀಶ್ ಶೆಟ್ಟಿ, ರವಿಚಂದ್ರ ಬಿ. ಎಸ್., ವೆಂಕಪ್ಪ ಗೌಡ ಆಜೇರಮಜಲು, ರತ್ಮಾಕರ ರೈ, ಪುರಂದರ ನಾಯ್ಕ, ದಿವಾಕರ ನಾಯ್ಕ, ದಯಾನಂದ ನಾಯಕ್, ಕರುಣಾಕರ ಎಸ್, ಐತ್ತಪ್ಪ ನಾಯ್ಕ, ಈಶ್ವರ ನಾಯ್ಕ, ಶಿವಣ್ಣ ರೈ ಮೂಡಂಬೈಲು, ಶ್ರೀರಂಗ ಶಾಸ್ತ್ರಿ, ಓಬಯ್ಯ ಎನ್, ಕುಂಞ ನಾಯ್ಕ ಬುಡಲೆ, ಶಂಭು ಭಟ್ ತೋಟದಮೂಲೆ, ಗೋಪಾಲಕೃಷ್ಣ ನಾಯ್ಕ, ಅವರನ್ನು ಸನ್ಮಾನಿಸಲಾಯಿತು. ಸೇನೆಯಲ್ಲಿ ಕರ್ತವ್ಯ ಸಮಯ ಹುತಾತ್ಮರಾದ ಸೋಮಪ್ಪ ಪೂಜಾರಿ, ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುವ ಕಿಶೋರ್ ಕುಮಾರ್, ಗಣೇಶ್ ಬಿ, ಮೋನಪ್ಪ ಗೌಡ, ರಾಜೇಶ್ ನಾಯ್ಕ, ವಿಜಯ ಗೌಡ, ಅವರ ಮನೆಯವರನ್ನು ಗೌರವಿಸಲಾಯಿತು.