ಮತದಾರನ ಹೆಸರು: ಜಯರಾಮ ಶೆಟ್ಟಿ. ತಂದೆ ಹೆಸರು ಹೊನ್ನಮ್ಮ ಮಾರ್ಕ್ ಫೆರ್ನಾಂಡಿಸ್. ಮತದಾರ ಪಟ್ಟಿಯಲ್ಲಿರುವ ಇಂಥ ಲೋಪದೋಷಗಳು ಎದ್ದು ಕಾಣುತ್ತವೆ. ಪಟ್ಟಿಯಲ್ಲಿ ಇರುವವರು ಎಲ್ಲರೂ ಜೀವಂತವಾಗಿದ್ದಾರೋ ಎಂಬುದು ಖಚಿತಗೊಂಡಂತಿಲ್ಲ. ಬಂಟ್ವಾಳ ತಾಲೂಕು ಎಪಿಎಂಸಿ ಚುನಾವಣೆಗೆ ಆಖಾಡ ಸಿದ್ಧವಾಗುತ್ತಿದೆ. 46 ಸಾವಿರ ಮತದಾರರು 12 ಸದಸ್ಯರನ್ನು ಚುನಾಯಿಸಲಿದ್ದಾರೆ.
ಡಿಸೆಂಬರ್ 4ರಂದು ಚುನಾವಣೆ. ತಾಲೂಕಿನ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ನ.14 ನಾಮಪತ್ರ ಸಲ್ಲಿಕೆ ಕೊನೇ ದಿನ. 15ರಂದು ಪರಿಶೀಲನೆ. 18ರಂದು ವಾಪಸ್ ಪಡೆಯಲು ಕೊನೇ ದಿನ. ಡಿ.4ರಂದು ಬೆಳಗ್ಗೆ 8ರಿಂದ 4ವರೆಗೆ ಮತದಾನ. ಡಿ.6ರಂದು ಮತ ಎಣಿಕೆ.
ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು.
ಈ ಚುನಾವಣೆ ಗ್ರಾ.ಪಂ.ಚುನಾವಣೆ ಮಾದರಿಯಲ್ಲಿ ಪಕ್ಷದ ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ವಿವಿಧ ಪಕ್ಷದ ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಹಿಡಿದು ಪ್ರಚಾರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ನೋಂದಾಯಿತ ಕೃಷಿಕರು, ವರ್ತಕರು ಮತದಾರರು.
ಕ್ಷೇತ್ರಗಳು ಹೀಗಿವೆ.
ಇಲ್ಲಿ ನೋಂದಾಯಿತ ವರ್ತಕರು ಯಾರೊಬ್ಬರು ಚುನಾವಣೆಗೆ ಸ್ಪಧಿ೯ಸಬಹುದು.
ಒಟ್ಟು 46001 ಮಂದಿ ತಮ್ಮಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.
ತುಂಬೆ ಕ್ಷೇತ್ರಕ್ಕೆ ಕಾಂಗ್ರಸ್ ಬೆಂಬಲಿತ ಅಭ್ಯರ್ಥಿಯಾಗಿ ಪದ್ಮನಾಭ ನರಿಂಗಾನ ರವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಕೃಷಿಕರು, ವರ್ತಕರ ಅನುಕೂಲಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟು ಬಿಜೆಪಿ ತಮ್ಮ ಬೆಂಬಲಿತ ಅಭ್ಯಥಿ೯. ಪರ ಮತಯಾಚನೆ ಮಾಡಲಿದ್ದರೆ, ರಾಜ್ಯ ಸರಕಾರ ಕೃಷಿಕರಿಗೆ ಜಾರಿ ತಂದಿರುವ ಯೋಜನೆಯನ್ನು ಮುಂದಿಟ್ಟು ಕಾಂಗ್ರೆಸ್ ತಮ್ಮ ಬೆಂಬಲಿತರ ಪರ ಮತಯಾಚನೆ ಮಾಡಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿಯೂ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೂಳ್ಳುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನಾಗಿಸಿದೆ.