ಬಂಟ್ವಾಳ: ಮಂಚಿ ಇರಾ ಗ್ರಾಮದ ಕುಕ್ಕಾಜೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸಂಘಟನೆ, ಸಂಸ್ಕಾರ, ಲೋಕಕಲ್ಯಾಣಾರ್ಥವಾಗಿ ಮಹಾಗಣಪತಿ ಹೋಮ ನಂತರ ಸೂರ್ಯೋದಯಕ್ಕೆ ಸರಿಯಾಗಿ ಅಖಂಡ ಭಜನಾ ಸಪ್ತಾಹ ಆರಂಭಗೊಂಡಿತು.
ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಪೂಜಾರಿ ನರ್ಕಳ ದೀಪ ಪ್ರಜ್ವಲನಗೈದರು. ಧರ್ಮ ಜಾಗರಣಾ ಟ್ರಸ್ಟಿನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ದೇವಸ್ಥಾನದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು.
ಈ ಸಂದರ್ಭ ಪತ್ತುಮುಡಿ ವಿಠಲ ಪ್ರಭು, ಪ್ರಶಾಂತ ಕಲ್ಲೂರಾಯ, ಸಂಜೀವ ಸಾಲ್ಯಾನ್ ಕುಕ್ಕಾಜೆ, ಸಿ.ಎಚ್.ಸೀತಾರಾಮ ಶೆಟ್ಟಿ, ಭಾಸ್ಕರ್ ಕುಲಾಲ್, ಗಣೇಶ್ ಆಚಾರ್ಯ ಕುಕ್ಕಾಜೆ, ಶೇಖರ ಡಿ, ಭಾಸ್ಕರ ಮದನಾಜೆ, ಸತೀಶ್ ಮದನಾಜೆ, ಸಂದೇಶ್, ಸಂಜಿತ್,ಶ್ರೀದೇವಿ ಕೈಯೂರು, ರ ವೀಂದ್ರ ಕುಕ್ಕಾಜೆ, ಚಂದ್ರಮೋಹನ್ ಕುಕ್ಕಾಜೆ, ರಮೇಶ್ ಪೂಜಾರಿ, ಜಗದೀಶ್ ಶೆಟ್ಟಿ ನೋಳ, ಪುಷ್ಪಾವತಿ ಮದನಾಜೆ ಮತ್ತಿತರರು ಉಪಸ್ಥಿತರಿದ್ದರು. ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಕುಕ್ಕಾಜೆಬೈಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಪ್ತಾಹವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 19ರ ಸೂರ್‍ಯೋದಯದವರೆಗೆ ಜರಗಲಿದೆ.