ಬಂಟ್ವಾಳ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯ ವತಿಯಿಂದ ಕೊಯಿಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನ.14ರಂದು ನಡೆಯಲಿದೆ.
ಬೆಳಗ್ಗೆ 10ಕ್ಕೆ ಗ್ರಾಪಂ ಅಧ್ಯಕ್ಷ ಜಯಂತ ಸಫಲ್ಯ ಉದ್ಘಾಟಿಸುವರು. ಎಸ್ ಕೆಪಿಎ ಬಂಟ್ವಾಳ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಎಸ್ ಕೆಪಿಎ ಜಿಲ್ಲಾ ಉಪಾಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ ಕರ್ಕೇರ, ಶಾಲಾ ಬೆಳ್ಳಿಹಬ್ಬ ಅಧ್ಯಕ್ಷ ಜಗದೀಶ ಕೊಯ್ಲ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು, ಭಜನಾ ಒಕ್ಕೂಟ ಅಧ್ಯಕ್ಷ ರವೀಂದ್ರ ಪೂಜಾರಿ ಕೈತ್ರೋಡಿ, ಎಸ್ ಕೆಪಿಎ ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ಕುಂದರ್, ಕೋಶಾಧಿಕಾರಿ ರವಿಪ್ರಕಾಶ್ ಕಲ್ಮನೆ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕೊಯಿಲ, ಸಿದ್ದಕಟ್ಟೆ ಉಪವಲಯ ಪ್ರತಿನಿಧಿ ಸುಧಾಕರ್ ಭಾಗವಹಿಸುವರು.
ನಂತರ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ, ಯೋಗ, ಕ್ವಿಜ್ ಸ್ಪರ್ಧೆಗಳು ನಡೆಯಲಿವೆ. ಸಮಾರೋಪ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಎಸ್ ಕೆಪಿಎ ಬಂಟ್ವಾಳ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಕೊಯಿಲ ಪ್ರೌಢಶಾಲೆಯ ಸುಧೀರ್ ಜಿ, ಎಸ್ ಕೆಪಿಎ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಬಿ.ಸಿ.ರೋಡ್ ಉಷಾ ಜ್ಯುವೆಲರ್ಸ್ ಮಾಲೀಕ ವಿಶ್ವನಾಥ್ , ಯಕ್ಷಲೋಕ ಬಿ.ಸಿ.ರೋಡ್ ನಿರ್ದೇಶಕ ಗೋಪಾಲ ಅಂಚನ್, ಮಜಿ ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ, ಎಸ್ ಕೆಪಿಎ ಬಂಟ್ವಾಳ ಗೌರವಾಧ್ಯಕ್ಷ ಆನಂದ ಎನ್ ಭಾಗವಹಿಸುವರು.
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ನಡೆದ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಚಿತ್ರಕಲಾ ಸ್ಪರ್ಧೆ ಬಹುಮಾನ , ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮುದ್ದು ಕಂದ ಮಕ್ಕಳ ಫೊಟೋ ಸ್ಪರ್ಧೆ ಬಹುಮಾನ ನೀಡಲಾಗುವುದು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…