ವಿಟ್ಲ: ಪುತ್ತೂರು ಕ್ಷೇತ್ರದ ಬಹುತೇಕ ರಸ್ತೆಗಳು ಉತ್ತಮ ರೀತಿಯಲ್ಲಿದ್ದು, ಕೆಲವು ರಸ್ತೆಗಳು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು.
ಅಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು ಗಂಗಾಧರ ಭಟ್ ಮಾತನಾಡಿ ಯೋಜನೆಗೆ ಜಾಗ ಬಿಡುವುದೇ ಸಮಸ್ಯೆಯಾಗಿದ್ದು, ಪಡಿಬಾಗಿಲು – ಅಳಿಕೆ – ಬುಳ್ಳೇರಿಕಟ್ಟೆ ರಸ್ತೆಯಲ್ಲಿ ಇಂಥ ಯಾವ ಸಮಸ್ಯೆಯೂ ಬಂದಿಲ್ಲ. ಊರಿನ ಒಳರಸ್ತೆಗಳಿಗೂ ಸರ್ಕಾರದ ಅನುದಾನಗಳು ಸಿಕ್ಕಾಗ ಗ್ರಾಮದ ಪ್ರತಿ ಮನೆಗೂ ರಸ್ತೆಯ ಸಿಗುವಂತಾಗುತ್ತದೆ ಎಂದು ತಿಳಿಸಿದರು.
ನಬಾರ್ಡ್ ಆರ್. ಐ. ಡಿ. ಎಫ್ 21 ಯೋಜನೆಯಡಿ 120ಲಕ್ಷ ರೂ. ಮೊತ್ತದಲ್ಲಿ ಮಡಿಯಾಲ ಸೇತುವೆ ನಿರ್ಮಾಣಕ್ಕೆ, ಜಿಲ್ಲಾ ಪಂಚಾಯಿತಿ – ತಾಲೂಕು ಪಂಚಾಯಿತಿ – ಸಮಾಜ ಕಲ್ಯಾಣ ಇಲಾಖೆಯ 3.8 ಲಕ್ಷ ರೂ ಅನುದಾನದ ಬೀಮಾವರ ಪರಿಶಿಷ್ಠ ಪಂಗಡ ಕಾಲನಿ ರಸ್ತೆ ಕಾಂಗ್ರೀಕರಣಕ್ಕೆ ಶಿಲಾನ್ಯಾಸ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲೂಕು ಪಂಚಾಯಿತಿ ಸದಸ್ಯ ಪದ್ಮನಾಭ ನಾಯ್ಕ ಅಳಿಕೆ, ಅಳಿಕೆ ಗ್ರಾಮ ಪಂಚಾಯಿತಿ ಅದ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಸ್ಯರಾದ ಮೋನಪ್ಪ ಎಂ, ಸುದಾಕರ ಮಡಿಯಾಲ, ಸದಾಶಿವ ಶೆಟ್ಟಿ ಅಳಿಕೆ, ಕವಿತಾ, ಗಿರಿಜಾ, ಸರಸ್ವತಿ, ಜಯಂತಿ, ಅಳಿಕೆ ವಲಯಾಧ್ಯಕ್ಷ ಸೀತಾರಾಮ ಶೆಟ್ಟಿ ಮುಳಿಯ, ಬಾಸ್ಕರ ಮಡಿಯಾಲ, ತಿರುಮಲೇಶ್ವರ ಮಡಿಯಾಲ, ಸುರೇಶ್ ಭಟ್, ರಶೀದ್ ವಿಎ, ಡಾ. ಜೆಡ್ಡು ಗಣಪತಿ ಭಟ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಉಮೇಶ್ ಭಟ್, ಪ್ರೀತಮ್, ಗುತ್ತಿಗೆದಾರ ಮಹಮ್ಮದ್ ರಫಿ ಮತ್ತಿತರರು ಉಪಸ್ಥಿತರಿದ್ದರು.