ಬಂಟ್ವಾಳ: ದೈನಂದಿನ ವ್ಯವಹಾರಕ್ಕೆ ಜನಸಾಮಾನ್ಯರು ಯು.ಎ.ಇ.ಎಕ್ಸ್ ಚೇಂಜ್ ಡಿಜಿಟಲ್ ವಾಲೆಟ್‌ನ್ನು ಸದುಪಯೋಗಿಸಿಕೊಳ್ಳುವಂತೆ ಸಂಸ್ಥೆಯ ಬಿ.ಸಿ.ರೋಡ್ ಶಾಖೆಯ ಪ್ರಕಟಣೆ ತಿಳಿಸಿದೆ.
ಪ್ರಧಾನಿಯವರು ಕಪ್ಪು ಹಣ ತಡೆಗೆ ಕೈಗೊಂಡ ಕ್ರಮಕ್ಕೆ ಪೂರಕವಾಗಿ ಜನಸಾಮಾನ್ಯರಿಗೆ ದೈನಂದಿನ ವ್ಯವಹಾರಗಳಿಗೆ ಡಿಜಿಟಲ್ ವಾಲೆಟ್ ಉಪಯೋಗವಾಗಿದೆ ಇಂತಹ ಡಿಜಿಟಲ್ ವಾಲೆಟ್‌ಗಳನ್ನು ಯು.ಎ.ಇ.ಎಕ್ಸ್ಚೇಂಜ್ ಈಗಾಗಲೇ ಪ್ರಸ್ತುತಪಡಿಸಿದೆ. ಶುಲ್ಕ ರಹಿತವಾಗಿ ವಾಲೆಟ್‌ನಿಂದ ವಾಲೆಟ್‌ಗೆ ಮತ್ತು ಬ್ಯಾಂಕ್‌ಗಳಿಗೆ ಹಣ ವರ್ಗಾವಣೆ,ಖರೀದಿ ವ್ಯವಹಾರಗಳಲ್ಲಿ ಹಣ ಪಾವತಿಗೆ ಸರಳವಾಗಿ ಬಳಸಬಹುದಾಗಿದ್ದು ವಾಲೆಟ್ ಪಡೆಯಲು ಉಚಿತವಾಗಿ ನೋದಣಿ ಮಾಡಬಹುದಾಗಿದೆ ಎಂದು ಅವರು ತಿಸಿದ್ದಾರೆ.