ಸಾಲೆತ್ತೂರು: ಬದ್ರಿಯಾ ಜುಮಾ ಮಸೀದಿ ಸಾಲೆತ್ತೂರು ಮತ್ತು ಹಯಾತುಲ್ ಇಸ್ಲಾಂ ಮದ್ರಸ ಸಾಲೆತ್ತೂರು ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಯಿತು.
ಈ ಸಂದರ್ಭಜಮಾಅತ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್ ಸಾಲೆತ್ತೂರು ಧ್ವಜಾಹರೋಣಗೈದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಮದ್ರಸ ಸದರ್ ಮುಅಲ್ಲಿಂ , ಅಬ್ದುಲ್ ಕಾದರ್ ಯಮಾನಿ ಪ್ರಾಸ್ತಾವಿಕವಾಗಿ ಮಾತನಾಡಿ,ಶುದ್ದ ಮನಸ್ಸಿನಿಂದ ಇತಿಹಾಸವನ್ನು ಓದಿದರೆ ಟಿಪ್ಪು ಸುಲ್ತಾನ್ ಒಬ್ಬ ಅಪ್ಪಟ ದೇಶಪ್ರೇಮಿ, ಏಕಸ್ವರೂಪ ಕಾನೂನು ವಿರುದ್ಧ ಧ್ವನಿ ಎತ್ತುವುದು ಅವಶ್ಯ ಎಂದರು.
ಮುಖ್ಯ ಭಾಷಣವನ್ನು ಮಾಡಿದ ಸಾಲೆತ್ತೂರು ಜುಮಾ ಮಸೀದಿ ಖತೀಬರಾದ ಬಹು ಅಬೂಬಕ್ಕರ್ ಮದನಿ ಸಾಲೆತ್ತೂರು ಟಿಪ್ಪು ಸುಲ್ತಾನ್ ಚರಿತ್ರೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಯಾಸೀನ್ ಪಾರಾಯಣ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.