ಬಂಟ್ವಾಳ: ನರೇಂದ್ರ ಮೋದಿ ಅವರ ನೋಟು ಬದಲಾವಣೆ ನೀತಿ ಪರಿಣಾಮ, ನಿತ್ಯದ ವ್ಯವಹಾರಕ್ಕಿಂತ ಅಧಿಕ ಠೇವಣಾತಿ ಗುರುವಾರ ವಿತ್ತೀಯ ಸಂಸ್ಥೆಗಳಲ್ಲಿ ಕಂಡುಬಂತು.
ವಿಟ್ಲ ಅಂಚೆ ಕಛೇರಿಯಲ್ಲಿ ನಿತ್ಯ 2ಲಕ್ಷ ವ್ಯವಹಾರ ನಡೆದರೆ, ಗುರುವಾರ 20 ಲಕ್ಷ ಠೇವಣಿಯಾಗಿದೆ. ಕೆನರಾ ಬ್ಯಾಂಕ್ ಅಲ್ಲಿ ದಿನನಿತ್ಯ 20 ಲಕ್ಷ ವ್ಯವಹಾರವಾದರೆ, 60 ಲಕ್ಷ ಜಮೆಯಾಗಿದೆ. ವಿಜಯ ಬ್ಯಾಂಕ್‌ನಲ್ಲಿ ನಿತ್ಯ 12 ಲಕ್ಷ ವ್ಯವಹಾರ ನಡೆಯುವಲ್ಲಿ 60 ಲಕ್ಷ ಸಂಗ್ರಹವಾಗಿದೆ. ಸಿಂಡಿಕೇಟ್ ಬ್ಯಾಂಕ್ ನಲ್ಲಿ ದಿನಂಪ್ರತಿ ಸುಮಾರು 30 ಲಕ್ಷ ವ್ಯವಹಾರ ನಡೆಯುವಲ್ಲಿ 1.5 ಕೋಟಿ ಜಮೆಯಾಗಿದೆ.
ಎಸ್‌ಬಿಎಂನಲ್ಲಿ 2 ಲಕ್ಷ ವ್ಯವಹಾರ ನಿತ್ಯವಾದರೆ ನೋಟಿನ ಬದಲಾವಣೆಯ ಅಂಗವಾಗಿ ಸುಮಾರು 8 ಲಕ್ಷ ಸಂಗ್ರಹವಾಗಿದೆ. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ನಿತ್ಯ 40 ಲಕ್ಷ ವ್ಯವಹಾರ ನಡೆಯುವಲ್ಲಿ 2 ಕೋಟಿ ಸಂಗ್ರಹವಾಗಿದೆ. ಎಸ್‌ಡಿಸಿಸಿ ಬ್ಯಾಂಕ್ ನಲ್ಲಿ 70 ಲಕ್ಷ ನಿತ್ಯ ವ್ಯವಹಾರ ವಾದರೆ ನೋಟಿನ ಬದಲಾವಣೆಯಿಂದ 1 ಕೋಟಿ ಸಂಗ್ರಹವಾಗಿದೆ.