ವಿಟ್ಲ: ವಿಟ್ಲ ವಲಯ ಶಾಮಿಯಾನ ಮಾಲಕರ ಸಂಘದ ಉದ್ಘಾಟನಾ ಸಮಾರಂಭ ಕಾಶೀಮಠ ಪ್ರಿಯಾ ಕಂಪೌಂಡ್‌ನಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ವಿಟ್ಲ ಅರಮನೆಯ ಜನಾರ್ಧನ ವರ್ಮ ಅರಸರು ಉದ್ಘಾಟಿಸಲಿದ್ದು, ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೊಪ್ಪಳ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ವರ್ತಕರಸಂಘದ ಅಧ್ಯಕ್ಷ ಎಚ್ ಜಗನ್ನಾಥ್ ಸಾಲ್ಯಾನ್, ವಕೀಲ ಕೆ ಅಬುಬಕ್ಕರ್, ಪುತ್ತೂರು ಶಾಮಿಯಾನ ಲೈಟಿಂಗ್ , ಸೌಂಡ್ಸ್ ಒಕ್ಕೂಟ ಅಧ್ಯಕ್ಷ ಮೌರಿಸ್ ಎಂ ಡಿಎಸ್, ಕರಾವಳಿ ತೆಂಟ್ ವರ್ಕ್ಸ್‌ನ ಅಬ್ದುಲ್ ರಶೀದ್ ಡಿ ಎಂ, ಶಾಮಿಯಾನ ವರ್ಕ್ಸ್ ಫಳ್ನೀರುನ ಅಬ್ದುಲ್ ಲತೀಫ್, ಪೂನ್ಯ ಟೆಂಟ್ ಮತ್ತು ಕ್ಲೋತ್ಸ್ ಕಂ ಹೊಗೆ ಬಜಾರ್‌ನ ರಾಜೇಶ್ ಕುಮಾರ್ ಪೂನ್ಯ, ವಿಟ್ಲ ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ರವಿವರ್ಮ ಮತ್ತಿತರರು ಭಾಗವಹಿಸಲಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…