ಬಂಟ್ವಾಳ: ಸಹಕಾರಿ ಸದಸ್ಯರಿಗೆ , ಠೇವಣಿದಾರರಿಗೆ ಮತ್ತು ಗ್ರಾಹಕರಿಗೆ ಚಳವಳಿ ಮೂಲಕ ಸಹಕಾರಿ ಕ್ಷೇತ್ರ ಎಷ್ಟು ಸದೃಡವಾಗಿದೆ ಎನ್ನುವುದನ್ನು ತೋರಿಸುವ ಕೆಲಸ ಈ ಮೂಲಕ ನಡೆಯಬೇಕಿದೆ ಎಂದು ಎಸ್.ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಾರಾಮ್ ಭಟ್ ಹೇಳಿದರು.
ಅವರು ಮಂಗಳುರಿನಲ್ಲಿ ನ.18ರಂದು ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದ ಆಚರಣೆ ಬಗ್ಗೆ ಬಂಟ್ವಾಳ ಯಶವಂತ ವ್ಯಾಯಮ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಸಹಕಾರಿಗಳ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸಹಕಾರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ , ಸಹಕಾರಿ ಹೋರಾಟವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕು ಅದಕ್ಕೆ ಎಲ್ಲಾ ಸಹಕಾರಿ ಕ್ಷೇತ್ರದ ಬಂಧುಗಳ ಸಹಕಾರ ಅತ್ಯಗತ್ಯವಾಗಿ ಬೇಕು ಎಂದರು.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ , ದ.ಕ ಜಿಲ್ಲಾ ಸಹಾಕರಿ ಯೂನಿಯನ್ ಅಧ್ಯಕ್ಷ ಹರೀಶ್ ಅಚಾರ್ಯ ,ಬಂಟ್ವಾಳ ಸಹಾಕಾರಿ ಯೂನಿಯನ್ ಅಧ್ಯಕ್ಷ ಜಿ ಆನಂದ , ಸಹಕಾರಿ ಸಂಘಗಳ ಮುಖ್ಯ ನಿರ್ವಾಹಾಣಾಧಿಕಾರಿಗಳ ಒಕ್ಕೂಟದ ಉಪಾಧ್ಯಕ್ಷ ಅಲ್ಬರ್ಟ ಡಿಸೋಜ . ಸಹಕಾರಿ ಅಧಿಕಾರಿಗಳಾದ ಎಚ್ ದೇವಾಡಿಗ, ತ್ರಿವೇಣಿರಾವ್, ವಲಯ ಮೇಲ್ವಿಚಾರಕಜರಾದ ಕೇಶವ ಕಿಣಿ ಮತ್ತು ಯೋಗೀಶ್ ಉಪಸ್ಥಿತರಿದ್ದರು.
ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕ ಬಿಕೆ.ಸಲಿ ಪ್ರಸ್ತಾವನೆಗೈದರು, ಮಂಗಳೂರು ಸ್ಕಾಡ್ಸ್ ನ ಅಧ್ಯಕ್ಷ ರವೀಂದ್ರ ಕಂಬಳಿ ವಂದಿಸಿದರು, ಸುಭಾಶ್‌ಚಂದ್ರ ಜೈನ್ ಕಾರ್‍ಯಕ್ರಮ ನಿರೂಪಿಸಿದರು.