ವಿಟ್ಲ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನೆಯಿಂದ ನಾಪತ್ತೆಯಾಗಿದ್ದಾಳೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ಯಾನ ಗ್ರಾಮದ ಪಿಲಿಂಗುಳಿ ನಿವಾಸಿ ಶ್ರೀಧರ ಶೆಟ್ಟಿ ಪುತ್ರಿ ಗಣ್ಯಶ್ರೀ (21) ನಾಪತ್ತೆಯಾಗಿರುವ ಯುವತಿ.
ಪುತ್ತೂರು ಖಾಸಗ ಕಾಲೇಜ್ ವಿದ್ಯಾರ್ಥಿಯಾಗಿರುವ ಈಕೆ ಕೆಲವು ದಿನದಿಂದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, 15 ದಿನಗಳ ಹಿಂದೆ ಮನೆಗೆ ಆಗಮಿಸಿದ್ದರು. ಈ ಬಗ್ಗೆ ಯುವತಿಯ ತಾಯಿ ಶಶಿಪ್ರಭ ಅವರು ದೂರು ನೀಡಿದ್ದಾರೆ. ಬಂಟ್ವಾಳ ಸಹಾಯಕ ಅಧೀಕ್ಷಕ ರವೀಶ್ ಸಿಆರ್, ವೃತ್ತ ನಿರೀಕ್ಷಕ ಮಂಜಯ್ಯ ಬೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಅರುಣ್‌ಕುಮಾರ್ ಪುತ್ತಿಲ, ಅರುಣ್ ವಿಟ್ಲ, ಕೆಪಿ ರಘುರಾಮ ಶೆಟ್ಟಿ, ಅಜಿತ್ ರೈ ಹೊಸಮನೆ, ಜಯಂತ್ ಸಿಎಚ್, ಪುರುಷೋತ್ತಮ ಕೋಲ್ಪೆ ಮತ್ತಿತರು ಠಾಣೆಗೆ ಬೇಟಿ ನೀಡಿ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥ ಪಡಿಸುವಂತೆ ಮನವಿ ಸಲ್ಲಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…