ಲೆಕ್ಕ ಮಾಡಲು ಕಷ್ಟವಾಗುವಷ್ಟು ಕೋಟಿ ರೂಪಾಯಿ!
ಬೆಂಗಳೂರು ಮಹಾನಗರದ ಬಸವೇಶ್ವರ ಸರ್ಕಲ್’ನಿಂದಹೆಬ್ಬಾಳದವರೆಗೆ ದೊಡ್ಡ ದೊಡ್ಡ ಮನುಷ್ಯರು ಓಡಾಡಲುಸರಕಾರ ನಿರ್ಮಿಸಲುಉದ್ದೇಶಿಸಿರುವ ಉಕ್ಕಿನ ಸೇತುವೆಗೆಬಿಡಿಎ ನಿಗದಿಪಡಿಸಿದ ಮೊತ್ತ ದಿನದಿಂದ ದಿನಕ್ಕೆಜಾಸ್ತಿಯಾಗುತ್ತಲೇ ಹೋಗುತ್ತಿದೆ. ಇದೀಗಹೈಕೋರ್ಟು ಇಂಥಪ್ರಯತ್ನಕ್ಕೆ ತಡೆ ಹಾಕಿದೆ. ಇಲ್ಲವಾದರೆ ಯಾವುದೇ ಕ್ಷಣದಲ್ಲಿಮೇಸ್ತ್ರಿಗಳು ಕಾಣಿಸಿಕೊಳ್ಳುತ್ತಿದ್ದರು!
ಹುರುಪಿನಿಂದ ಬೈರಾಸು ಹೆಗಲೇರಿಸಿ ಸರಸರನೆ ಓಡಾಡುತ್ತಾಫೈಲುಗಳೆಲ್ಲವೂ ಆ ಟೇಬಲ್ಲಿಂದ ಈ ಟೇಬಲ್ಲಿಗೆಓಡುವಂತೆನೋಡಿಕೊಳ್ಳುತ್ತಿದ್ದ ನಮ್ಮ ರಾಜಕಾರಣಿಗಳಿಗೆ ಇಂಥಯೋಜನೆಗಳು ಬಂದರೆ ಹಬ್ಬದೂಟ. ಸುಮಾರು 6.7 ಕಿಲೋಮೀಟರ್ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ1,761 ಕೋಟಿರೂ ಎಂದು ಅಂದಾಜು ವೆಚ್ಚ ನಿಗದಿ ಮಾಡಲಾಗಿತ್ತು. ಅಷ್ಟುಸಾಕಾಗೋಲ್ಲ ಎಂದುಮತ್ತೆ ಜಾಸ್ತಿಯೂ ಆಯಿತು.
ಸ್ಟೀಲ್ ಫ್ಲೈ ಓವರ್ ಬೇಕು ಹಾಗೂ ಬೇಡ ಎಂದು ನಾಗರಿಕರುಪ್ರತಿಭಟನೆನಡೆಸಿದರು. ಬೇಡ ಎಂದವರಿಗೆ ಕಾರಣ ಇದ್ದರೆ,ಬೇಕು ಎಂದವರಿಗೆಮತ್ತೊಂದು ಕಾರಣ. ಬೇಡ ಎಂದವರುಅಭಿವೃದ್ಧಿ ವಿರೋಧಿಗಳು ಎಂಬಹಣೆಪಟ್ಟಿ ಹೊತ್ತರು. ನಮ್ಮಸರಕಾರಕ್ಕೆ ಈಗಲೂ ಉಕ್ಕಿನ ಸೇತುವೆನಿರ್ಮಿಸಲು ಉತ್ಕಟಆಸೆ. ಬೆಂಗಳೂರು ಉದ್ಧಾರ ಮಾಡಲು ಈಗಲೇಹೊರಟೆಎಂದು ತಾಮುಂದು, ನಾ ಮುಂದು ಎಂದು ಸಚಿವರದಂಡೇಇಲ್ಲಿದೆ. ಇದರ ಹಿಂದೆ ಏನು ಮರ್ಮ ಅಡಗಿದೆ ಎಂಬುದುಎಲ್ಲರಿಗೂಗೊತ್ತು.
ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರಈಗಾಗಲೇನಾಲ್ಕು ವಾರಗಳ ತಡೆ ನೀಡಿರುವುದನ್ನು ಇಲ್ಲಿಸ್ಮರಿಸಬಹುದು. ಎನ್.ಜಿ.ಟಿನೀಡಿರುವ ತಡೆಯಾಜ್ಞೆತೆರವುಗೊಳಿಸುವಂತೆ ಕರ್ನಾಟಕ ಸರ್ಕಾರಮೇಲ್ಮನವಿಸಲ್ಲಿಸಲು ನಿರ್ಧರಿಸಿದ್ದು ಗಮನಾರ್ಹ.
ಅದೇನೇ ಇರಲಿ. ನಮ್ಮ ಸರಕಾರ (ಇದರಲ್ಲಿ ಯಾವುದೇ ಪಕ್ಷಒಳಗೊಂಡಿರಲಿ)ಗಳಿಗೆ ಹೊಸ ಪ್ರಾಜೆಕ್ಟ್ ಎಂದರೆ ಕಿವಿನಿಮಿರುತ್ತದೆ. ಆಪ್ರಾಜೆಕ್ಟ್ ಅನ್ನು ಅಖೈರುಗೊಳಿಸಿ, ಜಾರಿಮಾಡಲು ಕೈಯಲ್ಲಿ ಫೈಲು ಹಿಡಿದು ಮಂತ್ರಿ ಮಾಗಧರ ಸುತ್ತುವಮಂತ್ರಿಗಳು, ಅಧಿಕಾರಿಗಳದಂಡೇ ಇರುತ್ತದೆ. ಒಟ್ಟಾರೆ ಹಣಹೇರಳವಾಗಿ ಬಿಡುಗಡೆಯಾದರೆ ಆಯಿತು. ಉಳಿದದ್ದು ಹಾಳಾಗಿಹೋಗಲಿ ಎಂಬಂತೆ.
ಎತ್ತಿನಹೊಳೆ ಯೋಜನೆ ತಾಜಾ ಉದಾಹರಣೆ. ಈಗಾಗಲೇಸಾವಿರಾರು ಕೋಟಿ ರೂಪಾಯಿ ವ್ಯವಹಾರಗಳು ನಡೆದಿವೆ.ಅದರಿಂದಯಾರಿಗೆ ಲಾಭವಾಯಿತೋ ಗೊತ್ತಿಲ್ಲ. ನಷ್ಟವಂತೂಜನರಿಗೆ ಆಯಿತು. ಇಂತಿಪ್ಪ ಸರ್ಕಾರದ ಪ್ರತಿನಿಧಿಗಳಿಗೆಬೆಂಗಳೂರುಹೊರತುಪಡಿಸಿ ಬೇರೆ ಊರು ಉಂಟು ಎಂಬುದೇಗೊತ್ತಿಲ್ಲ. ಗೊತ್ತಿದ್ದರೂ ಜಾಣ ಕುರುಡು, ಜಾಣಕಿವುಡಂತೂ ಇದ್ದೇಇದೆ.
ನೀವು ನಮ್ಮ ಹಳ್ಳಿ ರಸ್ತೆಗಳನ್ನು ಒಂದು ಬಾರಿ ಗಮನಿಸಿ.ಸಂಚಾರಯೋಗ್ಯವಾಗಿದೆಯೇ ಎಂಬುದನ್ನು ನೋಡಿ.ಉದಾಹರಣೆಗೆಎಸ್.ಕೆ.ಬಾರ್ಡರ್ ದಾಟಿ ಶೃಂಗೇರಿಗೆ ಹೋಗುವರಸ್ತೆ. ಇಲ್ಲಿ ರಸ್ತೆಯ ಡಾಂಬರಿನಲ್ಲಷ್ಟೇ ವಾಹನಗಳು ಹೋಗಲುಸಾಧ್ಯ. ಮಣ್ಣಿಗೆಇಳಿಸುತ್ತೀರಾದರೆ ವಾಹನ ಮಗುಚಿ ಬೀಳುವುದು ಗ್ಯಾರಂಟಿ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂಥ ರಸ್ತೆಗಳು ಸಾಕಷ್ಟು ಇವೆ.ಕೆಲವು ಮಹಾನಗರ ಎಂಬಂತಿರುವ ಪ್ರದೇಶಗಳಲ್ಲೆಲ್ಲವಾಹನಗಳಪಕ್ಕದಲ್ಲೇ ನಡೆದುಕೊಂಡು ಹೋಗಬೇಕು,ಸರಿಯಾದ ರಸ್ತೆ ಬಿಡಿ, ಸರಿಯಾದ ಫುಟ್ ಪಾತ್ ಕೂಡ ಇಲ್ಲ.ಇಂಥದ್ದನ್ನು ಸರಿಪಡಿಸಬೇಕುಎಂಬ ಉತ್ಸಾಹ ನಮ್ಮಜನಪ್ರತಿನಿಧಿಗಳಿಗೇಕೆ ಬರೋದಿಲ್ಲ.
ಸ್ಟೀಲ್ ಸೇತುವೆ ನಿರ್ಮಿಸಿದರೆ ಸಿಗುವ ಹೆಗ್ಗಳಿಕೆ ಅಗಲ ಕಿರಿದಾದ,ಅಪಾಯಕಾರಿ ರಸ್ತೆಗಳ ಅಭಿವೃದ್ಧಿ ಮಾಡಿದರೆ ಸಿಗೋದಿಲ್ವೇ,ಅಥವಾಅಲ್ಲಿ ಸಂಚರಿಸುವವರು ಬಡವರು, ಅಥವಾ ಗತಿಇಲ್ಲದವರು ಎಂದೇ ಅರ್ಥವೇ, ಹಾಗಾದರೆ ಪ್ರಜಾಪ್ರಭುತ್ವಎಂದರೇನು? ಜನರಿಂದಆರಿಸಿ, ಜನಸೇವೆ ಮಾಡುತ್ತೇನೆ ಎಂದುಪ್ರತಿಜ್ಞೆ ಮಾಡಿ, ಜನಾಗ್ರಹಕ್ಕೆ ಬೆಲೆ ಕೊಡದೆ, ಶೋಕಿಮಾಡಿಕೊಂಡು, ಅವರಿಂದ ಹಾರಹೊಗಳಿಕೆಯನ್ನು ಬಯಸಿ,ಮಹಾರಾಜರಂತೆ ವರ್ತಿಸುವ ರಾಜಕಾರಣಿಗಳ ದರ್ಬಾರುಎಂದುಕೊಳ್ಳುವಷ್ಟರ ಮಟ್ಟಿಗೆ ವ್ಯವಸ್ಥೆ ಇದೆಎಂದುಭಾಸವಾಗುತ್ತದೆ.
ಆದರೂ ನಾವು ಧೃತಿಗೆಡಬಾರದು, ಹೋರಾಟಗಳಿಗೆ ಬೆಲೆ ಸಿಕ್ಕೇಸಿಗುತ್ತದೆ ಎಂಬುದಕ್ಕೆ ಹೈಕೋರ್ಟು ಸ್ಟೇ ಉದಾಹರಣೆ.
ಸರಕಾರವೂ ಉಕ್ಕಿನ ಸೇತುವೆ ನಿರ್ಮಿಸೋ ಬದಲು, ಇರುವಕಚ್ಚಾ ರಸ್ತೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿ.ಪ್ರವಾಸೀಕೇಂದ್ರಗಳಿಗೆ ತೆರಳುವ ರಸ್ತೆ, ನೀರು, ಮೂಲಸೌಕರ್ಯನೀಡೋದು ಪ್ರಥಮ ಆದ್ಯತೆ ಆಗಲಿ.
ಏನಂತೀರಿ?