ವಿಟ್ಲ

ಸಾಮಾಜಿಕ ಸಾಮರಸ್ಯದಿಂದ ಸುಂದರ ಸಮಾಜ

ವಿಟ್ಲ: ಸಾಮಾಜಿಕ ಸಾಮರಸ್ಯದಿಂದ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಿದ್ದು, ಸಾಮಾಜಿಕವಾಗಿ ಒಟ್ಟು ಸೇರುವ ಕಾರ್ಯ ಎಲ್ಲಾ ಕಡೆ ಆಗಬೇಕಿದೆ. ಕ್ರೀಡೆ ಸಮಾಜದಲ್ಲಿ ಸಹಾರ್ದತೆಯನ್ನು ಬೆಸೆಯುವ ಕೊಡಿಯಂತಿದ್ದು, ಇದರಿಂದ ಶಾಂತಿಯನ್ನು ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಪೆರುವಾಯಿ ಶಾಲೆಯ ಮುಖ್ಯ ಶಿಕ್ಷಕ ಕುಂಞ ನಾಯ್ಕ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸನ್ಮಾನಿಸಿದರು

ಅಡ್ಯನಡ್ಕ ಜನತಾ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಡ್ಯನಡ್ಕ ಸೌಹಾರ್ದ ಸಮಿತಿ ಆಶ್ರಯದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಆರೆಂಜ್ ಟ್ರೋಫಿ 2016 ಸೀಸನ್- 1 ಉದ್ಘಾಟಿಸಿ ಮಾತನಾಡಿದರು.

ದೇಶದ ಇತಿಹಾಸ ಪರಂಪರೆಯನ್ನು ಗಮನಿಸಿದರೆ ಅನೇಕ ಜಾತಿ – ಧರ್ಮ – ಭಾಷೆಯ ಜನ ಬಾಳಿ ಬದುಕಿದ್ದನ್ನು ಗಮನಿಸಬಹುದು. ಜಗತ್ತಿನ ಇತರ ದೇಶಗಳನ್ನು ಗಮನಿಸಿದರೆ ಭಾರತದ ಸಂಸ್ಕೃತಿಗೆ ಹೋಲಿಕೆ ಮಾಡುವ ಯಾವ ದೇಶವೂ ಇಲ್ಲ. ಭವ್ಯ ಭಾರತದ ನಿರ್ಮಾಣ ಕಾರ್ಯ ಯುವ ಶಕ್ತಿಯಿಂದ ಕ್ರೀಡಾಕೂಟದ ಮೂಲಕ ಮಾಡಲು ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್. ಮಹಮ್ಮದ್ ಮಾತನಾಡಿ ಜಾತಿ ಧರ್ಮದ ಬಿಟ್ಟು ದೇಶದ ಮೇಲಿನ ಅಭಿಮಾನದಲ್ಲಿ ಬಾಳಬೇಕು. ದೇಶದ ಸಂವಿಧಾನ ಎಲ್ಲ ಜನರ ಪವಿತ್ರ ಗ್ರಂಥವಾದಾಗ ಸಾಮಾಜದಲ್ಲಿ ಸಹೋದರತೆ ಸಾಮರಸ್ಯ ಬೆಳೆಯುತ್ತದೆ. ದೇಶದ ಜಾತ್ಯಾತೀತ ತತ್ವಕ್ಕೆ ಬೆಲೆಕೊಡುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ಸಾಮರಸ್ಯದ ಕ್ರೀಡಾಕೂಟಗಳು ಹೊಸ ಸಂದೇಶ ರವಾನಿಸುವಂತಾಗಬೇಕೆಂದು ಹೇಳಿದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಪೆರುವಾಯಿ ಶಾಲೆಯ ಮುಖ್ಯ ಶಿಕ್ಷಕ ಕುಂಞ ನಾಯ್ಕ, ವಿಟ್ಲ ಆರಕ್ಷಕ ಠಾಣೆಯ ಉಪನಿರೀಕ್ಷ ಪ್ರಕಾಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಆಳ್ವ ವಹಿಸಿದ್ದರು.

ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಕೇಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಸದಸ್ಯರಾದ ಸುಮಿತ್ರ, ವಿಠಲ ಕೋಪ್ರೆ, ಅಮೆಚುರು ಕಬಡ್ಡಿ ಅಸೋಸಿಯೇಶನ್ ಸದಸ್ಯ ಹಮೀದ್ ಕಂಬಳಬೆಟ್ಟು, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಉದಯ ಚೆಟ್ಟಿಯಾರ್, ಅಡ್ಯನಡ್ಕ ಜನತಾ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಾದವ ನಾಯ್ಕ, ಸಮಾಜಿಕ ದುರೀಣರಾದ ಮ್ಯಾತಿಕುಟ್ಟು ವೈದ್ಯರ್, ಎಂ ಎಸ್ ಹಮೀದ್, ಕಾರ್ಯಕ್ರಮ ಸಂಯೋಜಕ ಅಬ್ದುಲ್ ರಝಾಕ್, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಶಾಕೀರ್ ಎ ಎಂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಯಾದವ್ ಅಡ್ಯನಡ್ಕ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಅಬ್ದುಲ್ ಕರೀಂ ಕುದ್ದುಪದವು ವಂದಿಸಿದರು. ವಾಗ್ಮಿ ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು. ಮೊಹಮ್ಮದ್ ಕೆ.ಪಿ. ಹರ್ಷದ್ ಮರಕ್ಕಿಡಿ, ಗಿರೀಶ್ ಕೆ ಅಡ್ಯನಡ್ಕ, ಗಣೇಶ್ ಸಿ ಎಚ್ ಅಡ್ಯನಡ್ಕ, ಫಾರೂಕ್ ಸಿ ಎಚ್, ಮುನ್ನ ಅಡ್ಕ, ಕಾರ್ತಿಕ್ ರೈ ಅಡ್ಯನಡ್ಕ, ಬಾಬು ಟೈಲರ್ ಕುದ್ದುಪದವು, ಅಶೋಕ್ ಮೂಡಂಬೈಲು, ಮುನೀರ್ ಕುದ್ದುಪದವು, ಅಶ್ರಫ್ ಅಡ್ಯನಡ್ಕ ಸಹಕರಿಸಿದರು.

ಟ್ರೋಪಿ ವಿಜೇತರು:

ಕಬಡ್ಡಿ ಪಂದ್ಯಾಟದಲ್ಲಿ 27 ತಂಡಗಳು ಭಾವಹಿಸಿದ್ದು, ತ್ರೀ ಸ್ಟಾರ್ ಅಡ್ಯನಡ್ಕ ತಂಡವನ್ನು 16-27ರಲ್ಲಿ ಮಣಿಸಿದ ಬ್ರಿಗೇಡ್ ಬ್ರದರ್‍ಸ್ ಅಡ್ಯನಡ್ಕ ತಂಡ ಪ್ರಥಮ ಸ್ಥಾನ ಪಡೆಯಿತು. ಕಪಿಲ್ ಶರ್ಮ ಉತ್ತಮ ದಾಳಿಗಾರ, ವಿಕ್ರಾಂತ್ ಉತ್ತಮ ಹಿಡಿತಗಾರ, ಸಚಿನ್ ಉತ್ತಮ ಸವ್ಯಸಾಚಿಯಾಗಿ ಹೊರಹೊಮ್ಮಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts