ಬಂಟ್ವಾಳ

ತಿರುಮಲ ವೆಂಕಟರಮಣ ದೇವಳದಲ್ಲಿ ವಿಶ್ವರೂಪ ದರ್ಶನ

ಬಂಟ್ವಾಳ: ವಟಪುರ‌ಕೇತ್ರ ಎಂದೆ ಪ್ರತೀತಿ ಹೊಂದಿರುವ ಬಂಟ್ವಾಳ ಶ್ರೀ ತಿರುಮಲ ವಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ವಿಶ್ವರೂಪದಶ೯ನ ಸೇರಿದ ಭಗವದ್ಬಕ್ತರ ಕಣ್ಮನ ಸೆಳೆಯಿತು.

ಮುಂಜಾನೆ ಬ್ರಾಹ್ಮಿಮುಹೂತ೯ದ 4.45ರವೇಳೆಗೆ ದೇವಲದ ಪ್ರಧಾನ ಅಚ೯ಕ ಶ್ರೀನಿವಾಸ ಭಟ್ ತುಳಸಿಕಟ್ಟೆಯ ಮುಂಭಾಗ ದೀಪ ಪ್ರಜ್ವಲನಗೈಯುತ್ತಿದ್ದಂತೆ ನೆರೆದ ಭಕ್ತ ಸಮೂಹ ದೇವಳದ ಹೊರಾಂಗಣದ ಸುತ್ತ ಜೋಡಿಸಲ್ಪಟ್ಟ ಸಾವಿರಾರು ಹಣತೆ ದೀಪವನ್ನು ಏಕಕಾಲದಲ್ಲಿ ಬೆಳಗಿಸಿದರು.

ಜಾಹೀರಾತು




ಹೊರಾಂಗಣದ ಪ್ರವೇಶದ್ವಾರದಲ್ಲಿ ಕಡಗೋಲು ಕ್ರಷ್ಣ,ಶಂಖ, ಚಕ್ರ ಗದೆ ಪದ್ಮವನ್ನು ಹಣತೆಯಲ್ಲೆ ಜೋಡಿಸಿರುವುದು ಗಮನಸೆಳೆಯಿತು.

ಶ್ರೀದೇವರಿಗೆ ಕಾಕಡಾರತಿ, ವಿಶೇಷಪೂಜೆಯ ಬಳಿಕ ಭಗವದ್ಬಕ್ತರಿಗೆ ಶ್ರಿದೇವರ ದಶ೯ನಕ್ಕೆ ಅವಕಾಶ ಮಾಡಲಾಯಿತು. ಈ ಸಂದಭ೯ ಖ್ಯಾತ ಗಾಯಕ ರವೀಂದ್ರ ಪ್ರಭು ಅವರ ಬಳಗದ ಭಜನಾ ಕಾಯ೯ಕ್ರಮ, ಮಂತ್ರಪಠಣ ವಿಶೇಷ ಗಮನ ಸೆಳೆಯಿತು. ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶ್ರೀದೇವರ ವಿಶ್ವರೂಪದಶ೯ನವನ್ನು ಕಣ್ತುಂಬಿಕೊಂಡರು. ಸಾವಿರಾರು ಸಂಖ್ಯೆಯಲ್ಲಿ ಭಗವದ್ಬಕ್ತರು,ಭಜಕರು ಬೆಳಗ್ಗಿನವರೆಗೂ ಸಾಲುಗಟ್ಟಿ ಬಂದು ವಿಶ್ವರೂಪದಶ೯ನವನ್ನು ಕಣ್ತುಂಬಿಕೊಂಡು ಶ್ರೀದೇವರದಶ೯ನ ಪಡೆದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.