ಬಂಟ್ವಾಳ: ಹಿಂದೂ ಸಮಾಜ ರಕ್ಷಿಸುವ ನಿಟ್ಟಿನಲ್ಲಿ ವೈರಿಗಳನ್ನು ಎದುರಿನಿಂದಲೇ ಎದುರಿಸುವ ತಾಕತ್ತು ಹಿಂದೂ ಸಮಾಜದ ಯುವಕರಿಗೆ ಬರಬೇಕು, ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಪುಣ್ಯದ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಡಾ. ಪ್ರಭಾಕರ ಭಟ್ ಕರೆ ನೀಡಿದ್ದಾರೆ.
ಶಂಭುಗದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮಾಣಿ ಘಟಕ ಶ್ರೀ ಉಳ್ಳಾಲ್ತಿ ಶಾಖೆಯ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೂ ಧರ್ಮ ಜಗತ್ತಿನಲ್ಲಿರುವ ಏಕೈಕ ಧರ್ಮ. ಅದೊಂದು ಜೀವನ ಪದ್ದತಿ. ತನ್ನ ಸಂಸ್ಕೃತಿ, ದೇಶ ರಕ್ಷಣೆಗಾಗಿ ಹೋರಾಡಿದ ಮಹಿಳೆಯರಿದ್ದರೆ ಅದು ಭಾರತದಲ್ಲಿ ಮಾತ್ರ ಎಂದರು. ಹಿಂದೂ ಸಮಾಜದ ತಾಕತ್ತನ್ನು ಮತ್ತೆ ನೆನಪಿಸುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮಾಡುತ್ತದೆ. ನ್ಯಾಯ, ಧರ್ಮ, ಸತ್ಯಕ್ಕಾಗಿ ಹೋರಾಡಲು ಯಾರಿಗೂ ಭಯ ಪಡಬೇಕಾಗಿಲ್ಲ ಎಂದರು.
ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕೃಷ್ಣ ಮಾಡಿದ ಕೆಲಸವನ್ನು ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಇಂದು ಮಾಡುತ್ತಿದ್ದು ಈ ನಿಟ್ಟಿನಲ್ಲಿ ದೇಶಾದ್ಯಂತ ಯುವಕರನ್ನು ಸಂಘಟಿಸುತ್ತಿದೆ ಎಂದರು.
ದೇಶದಲ್ಲಿ 65 ಸಾವಿರಕ್ಕಿಂತಲೂ ಅಧಿಕ ಶಾಖೆಗಳಿದ್ದು 17 ಲಕ್ಷ ಕಾರ್ಯಕರ್ತರಿದ್ದಾರೆ. ಕರ್ನಾಟಕ್ಲಲಿಯೇ 700 ಘಟಕಗಳಿದ್ದು 20 ಸಾವಿರ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ವಿಶ್ವ ಹಿಂದೂ ಪರಿಷತ್ನ ಪುತ್ತೂರು ಜಿಲ್ಲಾ ಅಧ್ಯಕ್ಷ ಡೀಕಯ್ಯ ಪೆರೋಡಿ ನೂತನ ಪದಾಧಿಕಾರಿಗಳಿಗೆ ಜವಬ್ದಾರಿ ಹಂಚಿದರು. ವಿಎಚ್ಪಿ ದ.ಕ. ಜಿಲ್ಲಾಧ್ಯಕ್ಷ ಜಗದೀಶ ಶೇಣವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸುದೇಶ್, ಕೊರಗಪ್ಪ, ದಯಾನಂದ ಇದ್ದರು. ಲತೇಶ್ ಸ್ವಾಗತಿಸಿ, ನಿತೇಶ್ ವಂದಿಸಿದರು, ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)