ಬಂಟ್ವಾಳ ಬಂಟರ ಭವನ ಉದ್ಘಾಟನೆಗೆ ಆಕರ್ಷಕ ಹೊರೆದಿಬ್ಬಣ, ಶೋಭಾಯಾತ್ರೆ

ಬಂಟ್ವಾಳ: ಬಂಟರ ಸಂಘ, ಬಂಟ್ವಾಳ ತಾಲೂಕು (ರಿ) ವತಿಯಿಂದ ನೂತನ ಹವಾನಿಯಂತ್ರಿತ ‘ಬಂಟವಾಳದ ಬಂಟರ ಭವನ’ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ.

 

 

ಇದಕ್ಕೆ ಪೂರ್ವಭಾವಿಯಾಗಿ ಅಕ್ಟೋಬರ್ 29ರಂದು ಸಂಜೆ 4.30ರ ಬಳಿಕ ಬಿ.ಸಿ.ರೋಡಿನಿಂದ ಭವ್ಯ ಮೆರವಣಿಗೆಯಲ್ಲಿ ಹೊರೆದಿಬ್ಬಣ ಮತ್ತು ಆಕರ್ಷಕ ಶೋಭಾಯಾತ್ರೆ ಸಾಗಿತು.

 

ಈಗಾಗಲೇ ಕಟ್ಟಡ ಸಂಪೂರ್ಣ ಉದ್ಘಾಟನಗೆ ಸಜ್ಜಾಗಿ ನಿಂತಿದ್ದು, ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಹೊರೆದಿಬ್ಬಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಸಂಘದ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ಶೋಭಾಯಾತ್ರೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು.

ಅದಾದ ಬಳಿಕ ಬಸ್ಸು, ಕಾರುಗಳಲ್ಲಿ ಬಂಟವಾಳದ ಬಂಟರ ಭವನವನ್ನು ಮೆರವಣಿಗೆ ತಲುಪಿತು.

ಬಂಟವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಕಟ್ಟಡ ಸಮಿತಿ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಕಟ್ಟಡ ಸಮಿತಿ ಕೋಶಾಧಿಕಾರಿ ಸದಾನಂದ ಡಿ. ಶೆಟ್ಟಿ ರಂಗೋಲಿ, ಕಾರ್ಯದರ್ಶಿ ಶಶಿರಾಜ ಶೆಟ್ಟಿ ಕೊಳಂಬೆ, ಬಂಟ್ವಾಳ ಬಂಟರ ಸಂಘ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಉಪಾಧ್ಯಕ್ಷ ಪ್ರಫುಲ್ಲ ಆರ್. ರೈ ವಿಠಲಕೋಡಿ, ಬಂಟ್ವಾಳ ಬಂಟರ ಸಂಘ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಜತೆ ಕಾರ್ಯದರ್ಶಿ ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ರೈ ಬಾಲಾಜಿಬೈಲು, ಪ್ರಮುಖರಾದ ಡಾ. ಪ್ರಶಾಂತ್ ಮಾರ್ಲ, ಪದ್ಮನಾಭ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ  ಮೊದಲಾದವರು ಉಪಸ್ಥಿತರಿದ್ದರು.

ಚಿತ್ರಗಳು: ಕಿಶೋರ್ ಪೆರಾಜೆ

Team bantwal news