ಸಾರ್ವಜನಿಕರ ಅಸಡ್ಡೆಯಿಂದ ಸರಕಾರಿ ಶಾಲೆಗಳು ಅತಂತ್ರ

ಬಂಟ್ವಾಳ: ಸರಕಾರಿ ಶಾಲೆಗಳು ಸರಕಾರ ಹಾಗೂ ಸಾರ್ವಜನಿಕರ ಅಸಡ್ಡೆಯಿಂದ ಮುಚ್ಚಲ್ಪಡುತ್ತಿದೆ. ಇದರಿಂದ ಬಡವರ ಮಕ್ಕಳು ಅತ್ತ ಖಾಸಗಿಗೂ ಹೋಗಲಾಗದೆ ಇತ್ತ ಸರಕಾರಿ ಶಾಲೆಯೂ ಇಲ್ಲದೆ ತ್ರಿಶಂಕು ಸ್ಥಿತಿಗೆ ತಲುಪುವ ಸಂದರ್ಭ ಎದುರಾಗುತ್ತಿದೆ. ನಮ್ಮದೇ ತೆರಿಗೆಯಲ್ಲಿ ನಡೆಯುತ್ತಿರುವ ಸರಕಾರಿ ಶಾಲೆಗೆ ಮರುಜೀವ ತುಂಬುವ ಕೆಲಸ ಮಾಡೋಣ.ಅಂಥ ಶಾಲೆಯ ಮಕ್ಕಳನ್ನು ಜಾತಿಧರ್ಮದಗೋಡೆ ಮುರಿದು ಧಾರ್ಮಿಕ ಜಾಗದಲ್ಲಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.

ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮತನಾಡಿದರು. ಗುಲಾಬಿ ಅಮ್ಮನವರು ಕ್ಷೇತ್ರದ ದೇವಿಗೆ ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನೂತನವಾಗಿ ಅಭಿವೃದ್ಧಿಗೊಳಿಸಲು ಉದ್ದೇಶಿಸಿರುವ 1.5 ಕೋಟಿ ಅಂದಾಜು ವೆಚ್ಚದ ಸಮುದಾಯ ಭವನ ಹಾಗೂ ಭೋಜನಾಶಾಲೆಯ ನೀಲನಕ್ಷೆ ಮತ್ತು ವಿಜ್ಞಾಪನಾ ಪತ್ರವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಯಕ್ಷಗಾನಕ್ಕೆ ಬೆಂಬಲವಾಗಿ ನಿಲ್ಲಬಲ್ಲ ಯಕ್ಷಜ್ಯೋತಿ ಬಳಗವನ್ನು ಉದ್ಘಾಟಿಸಲಾಯಿತು.

ಆ ಬಳಿಕ ಸ್ಥಳೀಯ ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಬ್ರಹ್ಮರಕೂಟ್ಲುವಿನ ಆಯಿಷಾ ರಿಝಾ, ನೆತ್ತರಕೆರೆಯ ಮೋಕ್ಷಿತಾ, ಕೊಡ್ಮಾನಿನ ಮಧುಶ್ರೀ ತುಂಬೆಯ ಧನ್ಯಶ್ರೀ ಹಾಗೂ ಪ್ರೌಢಶಾಲಾ ವಿಭಾದಲ್ಲಿ ಕೊಡ್ಮಾಣ್ ಶಾಲೆಯ ಮನೀಷಾ ಅಜ್ಜಿಬೆಟ್ಟು, ಬಿಮೂಡದ ಪ್ರತ್ಯೇಕ್, ಬೆಂಜನಪದವಿನ ವಿದ್ಯಾರ್ಥಿ ಶ್ರೀಜಿತ್ ಇವರನ್ನು ಗೌರವಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ವಿಜಯ ನಾಯರ್, ಬೋಳಿಯಾರ್ ಕೆನರಾ ಬ್ಯಾಂಕ್ ಮ್ಯಾನೇಜರ್ ವಿ.ಬಾಲಕೃಷ್ಣ, ತಾ.ಪಂ. ಸದಸ್ಯ ಶಿವಪ್ರಸಾದ್ ಕನಪಾಡಿ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ವಳವೂರು, ಪತ್ರಕರ್ತ ಸಂದೀಪ್ ಸಾಲ್ಯಾನ್, ಸೇವಾ ಸಮಿತಿಯ ಅಧ್ಯಕ್ಷ ಸುಕುಮಾರ್ಗುಂಡಿಬೆಟ್ಟು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ವಿಶೇಷ ಘಟಕ ಯೋಜನೆ ಹಾಗೂ ಯಕ್ಷಜ್ಯೋತಿಬಳಗದ ಸಹಕಾರದಲ್ಲಿ ತರಿಕಿಟ ಕಲಾ ಕಮ್ಮಟ ಜ್ಯೋತಿಗುಡ್ಡೆ ಮತ್ತು ಸ್ಥಳೀಯ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಲೋಕಾಭಿರಾಮ ಯಕ್ಷಗಾನಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಉದಯಕುಮಾರ್ಜ್ಯೋತಿಗುಡ್ಡೆ ಮದ್ದಲೆಗಾರರಾದ ವಿನಯಕಡಬ, ಶ್ರೀಧರ ಪಡ್ರೆ, ಅಜಯ್ಕುಮಾರ್ಅಜಿಲ ಬೆಳ್ಳೂರು ಮುಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಪ್ರೇಮರಾಜ್ಕೊಯ್ಲ, ಪದ್ಮನಾಭ ಉದ್ಯಾವರ, ದಯಾನಂದ ಪಿಲಿಕೂರು, ಸದಾಶಿವ ಡಿ ತುಂಬೆ ಮೆರುಗು ನೀಡಿದರು.

ಸೇವಾಟ್ರಸ್ಟಿನ ಉಮೇಶ್ ರೆಂಜೋಡಿ ಸ್ವಾಗತಿಸಿ, ತಾರಾನಾಥಕೊಟ್ಟಾರಿಯವರು ಪ್ರಾಸ್ತವಿಸಿದರು. ಸೇವಾ ಸಮಿತಿಯ ಅಧ್ಯಕ್ಷರಾದ ಸುಕುಮಾರ್ ವಂದಿಸಿದರು.

Team bantwal news

Recent Posts